HomeUncategorizedನುಡಿದಂತೆ ನಡೆದಿದ್ದೇವೆ : ಶಾಸಕ ಜಿ.ಎಸ್. ಪಾಟೀಲ

ನುಡಿದಂತೆ ನಡೆದಿದ್ದೇವೆ : ಶಾಸಕ ಜಿ.ಎಸ್. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ : ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವು ಗ್ಯಾರಂಟಿಯಾಗಿದೆ ಎಂದು ಶಾಸಕ ಹಾಗೂ ಖನಿಜ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಅವರು ನಿಡಗುಂದಿ, ಹಾಲಕೇರಿ, ಮಾರನಬಸರಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರ ಪರವಾಗಿ ಮತಯಾಚನೆ ಮಾಡಿ, ಮಾತನಾಡಿದರು.

ಕಳೆದ 10 ವರ್ಷಗಳ ಕಾಲ ಆಡಳಿತ ನಡೆಸಿದ ಕೇಂದ್ರ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ಹಾಗೂ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರದೆ ಕಾಲಹರಣ ಮಾಡಿದ್ದು ನಿಜಕ್ಕೂ ದುರಂತವೇ ಸರಿ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಯಾಗುವ ಎಲ್ಲ ಲಕ್ಷಣಗಳು ಗೋಚರವಾಗಿದ್ದು, ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ರೀತಿಯಲ್ಲಿ ಬೆಂಬಲಿಸಬೇಕು ಎಂದ ಅವರು, ನಾವು ನುಡಿದಂತೆ ನಡೆದಿದ್ದೇವೆ. ಹೀಗಾಗಿ, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರು ಆನಂದಸ್ವಾಮಿ ಗಡ್ಡದೇವರಮಠರವರನ್ನು ಸನ್ಮಾನಿಸಿದರು.

ಸಂಗನಗೌಡ ಪಾಟೀಲ, ವ್ಹಿ.ಆರ್. ಗುಡಿಸಾಗರ, ವ್ಹಿ.ಬಿ. ಸೋಮನಕಟ್ಟಿಮಠ, ಸಿದ್ದಣ್ಣ ಬಂಡಿ, ಎಚ್.ಎಸ್. ಸೋಂಪುರ, ವೀರಪ್ಪ ಬಿಚ್ಚೂರ, ಶರಣಪ್ಪ ಕುರಿ, ಈರಣ್ಣ ನಿಡಗುಂದಿ, ಅಂದಪ್ಪ ಬಿಚ್ಚೂರ, ರೈಮಾನಸಾಬ ಮೋತೆಖಾನ್, ಶಿವಪ್ಪ ಜಾಲಿಹಾಳ, ಪರಸಪ್ಪ ತಳವಾರ, ಶಂಕ್ರಪ್ಪ ಸರ್ವಿ, ಶಿವಣ್ಣ ಸೂಡಿ, ಎಸ್.ಎಚ್. ಹಾದಿಮನಿ, ಅಂದಪ್ಪ ಚಲವಾದಿ, ಶರಣಪ್ಪ ಬೆಟಗೇರಿ, ಗೋವಿಂದಪ್ಪ ಪೂಜಾರ, ನಬೀಸಾಬ ಕೋಟೆಕಲ್, ಪಕ್ಕೀರಪ್ಪ ಕುಕನೂರ, ಬಾಬು ಮುಲ್ಲಾ, ಕುಬೇರಪ್ಪ ಗಡಾದ, ಗೀತಾ ಕುಕನೂರ, ಸುಮಂಗಲಾ ಶೇಬಗೊಂಡ, ಶಾಂತವ್ವ ಕಂಬಳಿ, ದಿಲ್‌ಶ್ಯಾದ್ ದೋಟಿಹಾಳ, ರಿಯಾಜ್ ಆಲೂರ, ಡಿ.ಡಿ. ದೋಟಿಹಾಳ, ಮಹ್ಮದ ಸವಡಿ, ಕಲ್ಲಪ್ಪ ಸಂಗಟಿ, ಅಡಿವೆಪ್ಪ ಜಿಗಳೂರ, ವೀರಣ್ಣ ಶಾಖಾ, ಶಿವಶರಣಪ್ಪ ಅಬ್ಬಿಗೇರಿ, ಚಂದ್ರಶೇಖರಯ್ಯ ವಸ್ತçದ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ಮತದಾರರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರಿಂದ ನಾವು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತೇವೆ ಎನ್ನುವ ಮಾತುಗಳು ಕೆಳಿಬರುತ್ತಿರುವುದು ಸ್ವಾಗಹರ್ತವಾಗಿದೆ. ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದ್ದು, ಮತದಾರರು ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷದ ಗುರುತಿಗೆ ನೀಡಬೇಕು. ನಾನು ಸಹ ನಿಮ್ಮ ಮನೆಯ ಮಗನಾಗಿದ್ದು, ಆಶೀರ್ವದಿಸಿ ಎಂದು ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!