ಬೆಂಗಳೂರು: ಪ್ರತಿ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಬಹಳ ಉಪಯೋಗ ಆಗುತ್ತಿದೆ. ಅಷ್ಟೇ ದುರುಪಯೋಗವೂ ಸಹ ಆಗುತ್ತಿದೆ. ಟೆಕ್ನಾಲಜಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ.
Advertisement
ಫೇಸ್‌ಬುಕ್, ಎಕ್ಸ್, ಯೂಟ್ಯೂಬ್‌ಗಳನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಆಗುತ್ತಿದೆ. ಇದನ್ನ ನಿಯಂತ್ರಣ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಒಂದು ವಿಭಾಗ ಪ್ರಾರಂಭ ಮಾಡಿದ್ದೇವೆ. ಎಡಿಜಿಪಿ ಸೈಬರ್ ಕ್ರೈಮ್ ವಿಭಾಗ ನೇಮಕ ಮಾಡಲಾಗಿದೆ.
ಪ್ರತಿ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾಡಿದ್ದೇವೆ. 247 ಪೊಲೀಸರು ಮಾನಿಟರ್ ಮಾಡುತ್ತಾರೆ. ಇಂತಹ ಕೇಸ್ ಕಂಡುಬಂದ ಕೂಡಲೇ ಸುಮೋಟೋ ಕೇಸ್ ಹಾಕುತ್ತಿದ್ದೇವೆ ಎಂದು ಹೇಳಿದರು.