ನವದೆಹಲಿ: ನಾವು ಸರ್ಕಾರದ ಮೇಲೆ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಂದುಸ್ತಾನ್ ಟೈಮ್ಸ್ ಲೀಡರ್ಶಿಪ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರಕಾರಗಳು ವೋಟ್ ಬ್ಯಾಂಕ್ ರಾಜಕೀಯಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸುತ್ತಿದ್ದರೆ, ಈಗಿನ ಸರ್ಕಾರವು ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ ಎಂದು ಹೇಳಿದ್ದಾರೆ.
ಇಂದು ಭಾರತವು ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ. ನಾವು ಈ ಆಕಾಂಕ್ಷೆಗಳನ್ನು ನಮ್ಮ ನೀತಿಗಳ ಮೂಲಾಧಾರವಾಗಿಸಿದ್ದೇವೆ. ನಮ್ಮ ಸರ್ಕಾರವು ಜನರ, ಜನರಿಂದ ಮತ್ತು ಜನರಿಗಾಗಿ ಪ್ರಗತಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಸ್ವಾತಂತ್ರ್ಯಾ ನಂತರ 70 ವರ್ಷಗಳಲ್ಲಿ ನೀಡಿದ್ದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ಕಳೆದ 10 ವರ್ಷಗಳಲ್ಲಿ ನೀಡಿದ್ದೇವೆ. ಜನರಿಗಾಗಿ ಹೆಚ್ಚು ಖರ್ಚು ಮಾಡುವುದು, ಜನರಿಗಾಗಿ ಹೆಚ್ಚು ಉಳಿಸುವುದು ನಮ್ಮ ಸರ್ಕಾರದ ವಿಧಾನವಾಗಿದೆ ಎಂದು ಅವರು ಹೇಳಿದ್ದಾರೆ.