ಹುಬ್ಬಳ್ಳಿ: ಉಪಚುನಾವಣೆಯಲ್ಲಿ ನಾವು ಸೋತಿದ್ದೇವೆ, ಆದರೇ ಸತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಾವು ಸೋತಿದ್ದೇವೆ, ಆದರೇ ಸತ್ತಿಲ್ಲ. ಕಾಂಗ್ರೆಸ್ಸಿನವರು ರಾಕ್ಷಸರು, ಮೊದಲು ಗೆಲುವು ಸಾಧಿಸುತ್ತಾರೆ. ಪಾಪದ ಕೊಡ ತುಂಬುವವರೆಗೆ ಪಾಪಿ ಚಿರಾಯು ಆಗಿಯೇ ಇರ್ತಾನೆ. 2023 ರಲ್ಲಿ ನಾವು ಅನ್ಯಾಯದ ಕೆಲಸ ಮಾಡಿ. ನಮ್ಮ ದೌರ್ಬಲ್ಯದಿಂದ ಸೋತಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ನೂ ವಿಧಾನಸೌಧ ನಮಾಜ್ ಮಾಡಲು ಮಾತ್ರ ಸೀಮಿತ ಅಂತ ಹೇಳ್ತಾರೆ. ಈ ದಾಸ್ಯ ಬಂದಿದ್ದೇ ಮತದ ಗುಲಾಮರಾಗಿ 1974ರ ತಿದ್ದುಪಡಿ ತಂದಿದ್ದೇ ಕಾರಣ. ಸಿಎಂ ಅವರೇ ಜಮೀರ್ ಅಹ್ಮದ್ ಖಾನ್ ಗೆ ಸರ್ವಾಧಿಕಾರಿ ಕೊಟ್ಟಿದ್ದೀರಾ..? ಜಮೀರ್ ಅಹ್ಮದ್ ಖಾನ್ ಟಿಪ್ಪು ಸುಲ್ತಾನ್ ಅಲ್ಲ. ಕಾಯಿದೆ ತಿದ್ದುಪಡಿ ಕೇಂದ್ರದಿಂದ ಆಗಬೇಕು. ಗೆಜೆಟ್ ರದ್ದು ಮಾಡಬೇಕಾಗಿರುವುದು ರಾಜ್ಯ ಸರ್ಕಾರ. ಕಾಂಗ್ರೆಸ್ ಎದೆಗಾರಿಕೆ ತೋರಿಸಿದರೇ ಭಾರತ ವಿಭಜನೆ ಆಗದೇ ಇರುವುದನ್ನು ತಡಬೇಕಿತ್ತು. ಕರಾಳ ಕಾಯಿದೆ ವಿರುದ್ಧ ಎದೆಗಾರಿಕೆ ತೋರಿಸಲು ಬಿಜೆಪಿ ಸಿದ್ಧವಾಗಿದೆ ಎಂದರು.