ಅನಿಲ ಮೆಣಸಿನಕಾಯಿಯವರಂತಹ ನಾಯಕರು ನಮಗೆ ಬೇಕು

0
We need leaders like Anila Menesinkai
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಯುವ ಮುಖಂಡ ಅನಿಲ ಮೆಣಸಿನಕಾಯಿ ನಮ್ಮ ಗದುಗಿನ ಹೆಮ್ಮೆಯ ನಾಯಕರು. ಅವರು ನಗರಕ್ಕೆ ಆಗಮಿಸಿದರೆ ಸಾವಿರಾರು ಜನರು ಸೇರುತ್ತಾರೆ. ಅವರಂತಹ ನಾಯಕರು ನಮಗೆ ಬೇಕು. ಸಮಾನತೆಯ ನಾಯಕತ್ವ ಗುಣ ಅವರಲ್ಲಿದೆ. ಮುಂದೆ ಅವರು ಶಾಸಕರಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗುತ್ತಾರೆ. ಭ್ರಷ್ಟಾಚಾರ ಮುಕ್ತ ರಾಜಕಾರಣ ಗದಗದಲ್ಲಿ ಇರಬೇಕು. ಅಧಿಕಾರದಲ್ಲಿರುವರು ಮಕ್ಕಳನ್ನು ಬೆಳೆಸಬಾರದು. ಕಾರ್ಯಕರ್ತರನ್ನು ಬೆಳೆಸಬೇಕು. ಜಿಲ್ಲೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಅನಿಲ ಮೆಣಸಿನಕಾಯಿಯವರಂತಹ ನಾಯಕ ಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬುದ್ಧ, ಬಸವ, ಭೀಮ, ರಾಮ, ಶರೀಫರ ಸಮಾನತೆಯ ಮಂದಿರ ಕಟ್ಚಲು ಈಗಾಗಲೇ ಒಂದು ಹೆಜ್ಜೆ ಮುಂದೆ ಇಡಲಾಗಿದೆ.

2023ರ ಚುನಾವಣೆ ನಂತರ ಅನಿಲ ಮೆಣಸಿನಕಾಯಿ ಗದುಗಿಗೆ ಬರುತ್ತಿಲ್ಲ ಎಂದು ಹಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಅವರು ಗದುಗಿನ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಸಮಾಜದಲ್ಲಿನ ಮೇಲು-ಕೀಳು, ಅನಿಷ್ಠ ಪದ್ಧತಿ ಕುರಿತು ಹೋರಟ ಮಾಡಿದ್ದಾರೆ. ಹಿಂದೆ ಮನುಕುಲಕ್ಕಾಗಿ ಭಿಕ್ಷೆ ಬೇಡಿ ಬಡವರ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ್ದಾರೆ. ಚುನಾವಣೆಯ ಸೋಲಿನ ನಂತರವೂ ಹತಾಶರಾಗದೇ ಜನತಾ ಸದನ ಎನ್ನುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅವರು ಗದುಗಿನಿಂದ ದೂರ ಇದ್ದರೂ ಇಲ್ಲಿನ ಜನತೆಯ ಬಗ್ಗೆ ಚಿಂತನೆ ನಡೆಸುತ್ತಾರೆ. ಫೇಸ್‌ಬುಕ್ ಲೈವ್ ಬಂದು ಗದಗ ಜನತೆಗೆ ನೀರು, ರಸ್ತೆ, ವಿದ್ಯುತ್ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದು ಗಮನಾರ್ಹ ಸಂಗತಿಯಾಗಿದೆ ಎಂದು ಹೇಳಿದರು.

ರಾಜಕೀಯಕ್ಕೆ ಬಂದವರು ಗಳಿಸಿಕೊಳ್ಳುತ್ತಾರೆ. ಆದರೆ, ಅನಿಲ ಮೆಣಸಿನಕಾಯಿ ಗದುಗಿಗೆ ಬಂದು ಕಳೆದುಕೊಂಡಿದ್ದಾರೆ. ಅವರಲ್ಲಿ ಸ್ನೇಹದ ಗುಣವಿದೆ. ಅವರ ಗುಣ ನೋಡಿ ಜನತೆ ಅವರ ಹಿಂದೆ ಸಾಗರದಂತೆ ಬರುತ್ತಾರೆ. ಅನಿಲ ಮೆಣಸಿನಕಾಯಿ ಪ್ರಶ್ನಾತೀತ ನಾಯಕರಾಗಿದ್ದು, ಭೀಮ, ಬಸವ, ಬುದ್ಧ, ರಾಮ, ಶರೀಫರ ಮಂದಿರ ಕಟ್ಟಿ ಸಮಾಜದಲ್ಲಿ ಎಲ್ಲರೂ ಒಪ್ಪುವಂತಹ ಸಮಾನತೆಯ ಮಂದಿರ ಕಟ್ಟಲು ತಿರ್ಮಾನಿಸಿದ್ದು ಗಮನಾರ್ಹ ಸಂಗತಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅನಂದ ಸೇಠ್ ಹಾಗೂ ಚಂದ್ರಶೇಖರ ಹರಿಜನ ಹೇಳಿದರು.

ಈ ಸಂದರ್ಭದಲ್ಲಿ ಮುತ್ತಣ್ಣ ಗದುಗಿನ, ಉಡಚಪ್ಪ ಹಳ್ಳಿಕೇರಿ, ವಸಂತ ಪಡಗದ, ಮಂಜುನಾಥ್ ಮ್ಯಾಗೇರಿ, ತೋಂಟೇಶ್ ಮುತ್ತಿನಪೆಂಡಿಮಠ, ಚನ್ನಮ್ಮ ಹುಳಕಣ್ಣನವರ, ವಿಜಯಲಕ್ಷ್ಮಿ ಮಾನ್ವಿ, ಶರಣಪ್ಪ ಚಿಂಚಲಿ, ಪರಮೇಶ ನಾಯಕ, ಟಿ.ಡಿ ಪೂಜಾರ ಉಪಸ್ಥಿತರಿದ್ದರು.

ಕುರ್ತಕೋಟಿ ಗ್ರಾಮದಲ್ಲಿ ಸಮಾನತೆಯ ಮಂದಿರ ಕಟ್ಟಲು 2 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ದೇಶಕ್ಕೆ ರಾಮ ಮಂದಿರ ಒಂದು ಕಡಯಾದರೆ, ಇಡೀ ದೇಶವೇ ತಿರುಗಿ ನೋಡುವಂತಹ ಭೀಮ ಮಂದಿರ ಕಟ್ಟಲು ಅನಿಲ ಮೆಣಸಿನಕಾಯಿ ಪಣ ತೊಟ್ಟಿದ್ದಾರೆ. ಮಂದಿರ ನಿರ್ಮಿಸಲು ಅನೇಕ ಮುಖಂಡರ ಸಲಹೆ-ಸೂಚನೆ ಪಡೆದು ಅತೀ ಶಿಘ್ರದಲ್ಲಿ ಮಂದಿರ ನಿರ್ಮಾಣ ಪ್ರಾರಂಭ ಮಾಡಲಾಗುವುದು. ರಾಜ್ಯಾದ್ಯಂತ ಸಂಚರಿಸಿ ಭಿಕ್ಷೆ ಬೇಡಿ ಮಂದಿರ ನಿರ್ಮಿಸಲು ಅನಿಲ ಮೆಣಸಿನಕಾಯಿ ತೀರ್ಮಾನಿಸಿದ್ದಾರೆ. ಅವರ ಜೊತೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲುತ್ತೇವೆ.
– ಕಾಂತಿಲಾಲ್ ಬನ್ಸಾಲಿ.
ಬಿಜೆಪಿ ಹಿರಿಯ ಮುಖಂಡರು.


Spread the love

LEAVE A REPLY

Please enter your comment!
Please enter your name here