ವಿಜಯಸಾಕ್ಷಿ ಸುದ್ದಿ, ಗದಗ: ಪರಿಶುದ್ಧ ಹವಾಗುಣಕ್ಕೆ ದೇಶದಲ್ಲಿಯೇ ಹೆಸರಾಗಿರುವ ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಗದಗ ಎಪಿಎಂಸಿ ಯಾರ್ಡ್ ನ ವಾಯು ವಿಹಾರ ಬಳಗದ ಅಧ್ಯಕ್ಷ ಚನ್ನವೀರಪ್ಪ ಹುಣಶೀಕಟ್ಟಿ ಹೇಳಿದರು.
ವಾಯು ವಿಹಾರ ಬಳಗ ಕಳಸಾಪೂರದ ಶ್ರೀಗುರು ರಾಘವೇಂದ್ರ ಮಠದಿಂದ ಸುಕ್ಷೇತ್ರ ವೆಂಕಟಾಪೂರದ ಶ್ರೀ ವೆಂಕಟೇಶ್ವರ ದೇವಸ್ಥಾನದವರೆಗೆ ಕೈಗೊಂಡಿದ್ದ ಪಾದಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಅವುಗಳಲ್ಲಿ ಕಪ್ಪತ್ತಗುಡ್ಡವೂ ಒಂದಾಗಿದೆ. ಇಂತಹ ರಮಣೀಯ ನಿಸರ್ಗಧಾಮ ನಮ್ಮ ಭಾಗದಲ್ಲಿರುವದು ನಮ್ಮ ಹೆಮ್ಮೆ. ತಿರುಪತಿ ಶ್ರೀ ವೆಂಕಟೇಶ ದೇವಾಲಯದ ದರ್ಶನ ಪಡೆಯಲಾಗದವರು ಗದಗ ತಾಲೂಕಿನ ವೆಂಕಟಾಪೂರದ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಧನ್ಯರಾಗಬೇಕೆಂದು ಹಿರಿಯರು ಹೇಳುತ್ತಾರೆ. ಆ ಹಿನ್ನೆಲೆಯಲ್ಲಿ ನಾವೆಲ್ಲ ವಾಯು ವಿಹಾರ ಬಳಗದವರು ಪಾದಯಾತ್ರೆ ಕೈಗೊಂಡಿದ್ದೇವೆ ಎಂದರು.
ವಾಯು ವಿಹಾರ ಬಳಗದ ಪ್ರಕಾಶ ಉಗಲಾಟದ, ಬಾಬುಗೌಡ ಮಲ್ಲನಗೌಡ್ರ, ಮುರುಘರಾಜೇಂದ್ರ ಬಡ್ನಿ, ರಾಜು ಮಲ್ಲಾಡದ ಮುಂತಾದವರು ಮಾತನಾಡಿದರು. ರಮೇಶ ಶಿಗ್ಲಿ ಪ್ರಾರ್ಥಿಸಿದರು, ಮಧುಸೂಧನ ಪುಣೇಕರ ಸ್ವಾಗತಿಸಿದರು. ಸಂಜಯ ಬಾಗಮಾರ ನಿರೂಪಿಸಿದರು. ಕೊನೆಗೆ ವಿಶ್ವನಾಥ ಯಳಮಲಿ ವಂದಿಸಿದರು.
ಪಾದಯಾತ್ರೆಯಲ್ಲಿ ತಾತನಗೌಡ ಪಾಟೀಲ, ಮಹಾಂತೇಶ ಪಾಟೀಲ, ಶರಣು ಗದಗ, ಮೌಲಾವಲಿ ಮುಲ್ಲಾನವರ, ಚಂದ್ರು ಸುರಕೋಡ, ವಿಜಯ ಶಿವಪ್ಪಗೌಡ್ರ, ಸಿದ್ಧಣ್ಣ ಹಲವಾಗಲಿ, ಅರವಿಂದ ಕಾಮತ, ಅಶೋಕಗೌಡ ಪಾಟೀಲ, ಮಂಜುನಾಥ ಬೇಲೇರಿ, ಸಿದ್ಧಣ್ಣ ಮುನವಳ್ಳಿ, ರಾಜು ಮಲ್ಲಾಡದ, ರೇಣುಕಪ್ರಸಾದ ಹಿರೇಮಠ, ಬಾಪುಗೌಡ ಸಂಕನಗೌಡ್ರ, ಸುರೇಶ ರಡ್ಡೇರ, ಉಮೇಶ ನಾಲವಾಡ, ಮಹಾಂತೇಶ ಬಾತಾಖಾನಿ, ಚಿಕ್ಕನಗೌಡ್ರ, ಶರಣಪ್ಪಗೌಡ ಪವಾಡಿಗೌಡ್ರ ಮುಂತಾದವರಿದ್ದರು.