ಹಾವೇರಿ:- ಮೂರೂವರೆ ಅಲ್ಲ, ಎಂಟೂವರೆ ವರ್ಷಗಳ ಕಾಲ ಅಧಿಕಾರದಲ್ಲಿ ಇರ್ತೇವೆ ಎಂದು ವಿಪಕ್ಷಗಳಿಗೆ DCM ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಇಂದು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರ ಪ್ರಚಾರ ಕಾರ್ಯಕ್ರಮ ಶಿಗ್ಗಾವಿ ಕ್ಷೇತ್ರದ ಹೋತನಹಳ್ಳಿ ಗ್ರಾಮದಲ್ಲಿ ನಡೆಯಿತು.
ತೆರೆದ ವಾಹನದಲ್ಲಿ ಡಿಕೆಶಿ ಯಾಸಿರ್ ಪಠಾಣ್ ಪರ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರೂವರೆ ವರ್ಷ ಅಲ್ಲ. ಎಂಟೂವರೆ ವರ್ಷ ಆಡಳಿತದಲ್ಲಿ ಇರುತ್ತೇವೆ. ಬೊಮ್ಮಾಯಿ 15 ವರ್ಷದ ಆಡಳಿತ ಮಾಡಿದ್ದಾರೆ. ಎರಡೂವರೆ ವರ್ಷ ಸಿಎಂ ಆಗಿದ್ದರು.
ಆದರೆ ನಮ್ಮಂತಹ ಒಂದು ಯೋಜನೆ ಕೊಟ್ಟಿದ್ದಾರಾ ನೀವೆ ಹೇಳಿ. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ದಿನಬಳಕೆ ವಸ್ತು ಬೆಲೆ ಜಾಸ್ತಿ ಆದ್ದರಿಂದ ನಾವು ಐದು ಗ್ಯಾರಂಟಿ ಜಾರಿಗೆ ತಂದೆವು.
ಇನ್ನು 1.29 ಕೋಟಿ ಮಹಿಳೆಯರಿಗೆ ನೇರವಾಗಿ 2 ಸಾವಿರ ರೂಪಾಯಿ ಹಣವನ್ನು ಅವರ ಖಾತೆಗೆ ಹಾಕುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.