ಬೆಂಗಳೂರು: ವಾಲ್ಮೀಕಿ ನಿಗಮಕ್ಕೆ ಎಷ್ಟು ಅನುದಾನ ನಿಗದಿಯಾಗಿತ್ತೋ ಅಷ್ಟು ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮಕ್ಕೆ ಎಷ್ಟು ಅನುದಾನ ನಿಗದಿಯಾಗಿತ್ತೋ ಅಷ್ಟು ಕೊಡುತ್ತೇವೆ. ವಾಲ್ಮೀಕಿ ನಿಗಮದಲ್ಲಿ 89.63 ಕೋಟಿ ರೂ. ಅಕ್ರಮ ಆಗಿತ್ತು. ಈಗ 5 ಕೋಟಿ ರೂ. ವಾಪಸ್ ಬಂದಿದೆ.
71.54 ಕೋಟಿ ರೂ. ಎಸ್‌ಐಟಿ ಅವರು ರಿಕವರಿ ಮಾಡಿದ್ದಾರೆ. ಉಳಿದ 13 ಕೋಟಿ ರೂ. ರಿಕವರಿ ಆಗಬೇಕು. ಅದನ್ನು ಮಾಡೋದಾಗಿ ಎಸ್‌ಐಟಿ ಅವರು ಹೇಳಿದ್ದಾರೆ. 13 ಕೋಟಿ ರೂ. ರಿಕವರಿ ಆದ್ರೆ ಎಷ್ಟು ಅಕ್ರಮ ಅಗಿದೆ ಅಂತ ನಮಗೆ ಮಾಹಿತಿ ಸ್ಪಷ್ಟವಾಗಿ ತಿಳಿಯಲಿದೆ. ಸದ್ಯ ಕೋರ್ಟ್ ಮುಂದೆ ಕೇಸ್ ನಡೆಯುತ್ತಿದೆ. ಕೋರ್ಟ್ನಲ್ಲಿ ಏನು ತೀರ್ಮಾನ ಆಗುತ್ತೆ ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಜಾತಿ ಪ್ರಮಾಣಪತ್ರ ಗೊಂದಲ ನಿವಾರಣೆ ಮಾಡಿ ಇಲಾಖೆ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆ ಅವರಿಗೆ ಸೂಚನೆ ನೀಡಿದ್ದೇನೆ ಪ್ರಮಾಣಪತ್ರ ಗೊಂದಲ ನಿವಾರಣೆ ಮಾಡಿ ಆದೇಶ ಮಾಡಲು ಸೂಚನೆ ನೀಡಿದ್ದೇನೆ. ಆ ಸಮಸ್ಯೆಯೂ ಪರಿಹಾರ ಆಗುತ್ತದೆ ಎಂದು ತಿಳಿಸಿದರು.



