ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ದೊಡ್ಡ ದೊಡ್ಡ ನಾಯಕರು ಈಡಿಗ ಸಂಘವನ್ನು ಕಟ್ಟಿದ್ದಾರೆ. ಆದರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ. ರಾಜಕೀಯ ಕುತಂತ್ರದ ಸಮಾವೇಶ,
ಇದರಿಂದ ಒಳ್ಳೆಯದಾಗಲ್ಲ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಅನುದಾನವನ್ನು ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನು ಮಾಡಿದ್ದಾರೆಂದು ಹೇಳಬೇಕು. ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾವು ಭಾಗಿಯಾಗುವುದಿಲ್ಲ. ಪ್ರಣಾವನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹಕ್ಕೆ ಶುಭವಾಗಲಿ ಎಂದು ಹೇಳಿದರು.
ಸಮಾಜ ಒಡೆಯೋ ಪ್ರಯತ್ನ ಮಾಡಿದ್ರೆ ಮುಂದೆ ಏನಾಗತ್ತೆ ನೋಡೋಣ. ಪ್ರಣಾವನಂದ ಸ್ವಾಮೀಜಿ ಸತ್ಯಾಗ್ರಹ ಸಮುದಾಯದ ಪರ. ಹಿಂದುಳಿದ, ಅತಿ ಹಿಂದುಳಿದವರ ಪರ ಸತ್ಯಾಗ್ರಹ ಮಾಡುತ್ತಿದ್ದು, ಅವರಿಗೆ ಒಳ್ಳೆಯಾದಗಲಿ.
ಪ್ರಣಾವನಂದ ಸ್ವಾಮೀಜಿಗೆ ಜಾಸ್ತಿ ಹುಳುಕು ಗೊತ್ತಿದೆ. ಅದಕ್ಕಾಗಿ ಅವರನ್ಮ ದೂರ ಇಟ್ಟಿದ್ದಾರೆ . ಸ್ವಾಮೀಜಿ ನಮ್ಮಜಾತಿಯವರು ಅಲ್ಲ ಅಂದ್ರು. ಅವರ ಪಾದ ಪೂಜೆ ಮಾಡಿದವರು ಯಾರು ಎಂದು ಪ್ರಶ್ನಿಸಿದ ಹರಿಪ್ರಸಾದ್, ಇವರೇನು ಜಾತಿ ಪ್ರಮಾಣ ಪತ್ರ ಕೊಡುವುದಕ್ಕೆ ತಹಶೀಲ್ದಾರ್ ಏನು ಎಂದು ವಾಗ್ದಾಳಿ ನಡೆಸಿದರು.