ಬೆಂಗಳೂರು: ರಾಜ್ಯದ ಬೈ ಎಲೆಕ್ಷನ್ʼನಲ್ಲಿ ನಾವು ಮೂರೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಮೂರೂ ಕ್ಷೇತ್ರಗಳನ್ನು ಗೆಲ್ಲಬೇಕು ಅಂತಿದ್ದೇವೆ. ಆ ವಾತಾವರಣ ನಮ್ಮ ರಾಜ್ಯದಲ್ಲಿದೆ. ಹಿಂದೆ ಬೊಮ್ಮಾಯಿ 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.
ಈಗ 10 ಸಾವಿರಕ್ಕೆ ಬಂದಿದ್ದಾರೆ ಅಂತಿದೆ. ಅಷ್ಟು ಕಡಿಮೆ ಅಂದ್ರೆ ನೆಗೆಟಿವ್ ಇದೆ ಅಂತ ತಾನೇ. ಆ ಸೀಟನ್ನು ನಾವು ಗೆಲ್ಲಬೇಕು. ಮೂರು ಸೀಟ್ಗಳನ್ನೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ವಿಕ್ರಂ ಗೌಡ ಅವರದ್ದು ನಕಲಿ ಎನ್ಕೌಂಟರ್ ಎಂಬ ಟೀಕೆಗೆ ಪ್ರತಿಕ್ರಿಯಿಸಿ, ನ್ಯಾಯಯುತ ಪ್ರತಿಭಟನೆಗೆ ಅವಕಾಶವಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಕೈಜೋಡಿಸಿ. ಪಾವಗಡದಲ್ಲೂ ನಕ್ಸಲರು ಜನರನ್ನು ಕೊಂದಿದ್ದರು. ಆಗಲೂ ನಾವು ಮನವಿ ಮಾಡಿಕೊಂಡೆವು. ನೂರು ಜನ ಶಸ್ತ್ರ ತ್ಯಜಿಸಿ ಶರಣಾದರು ಎಂದು ಹೇಳಿದರು.