ರಾಜ್ಯ ಸರ್ಕಾರಕ್ಕೆ ಸದ್ಯದಲ್ಲೇ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ: ಕೋಟ ಶ್ರೀನಿವಾಸ ಪೂಜಾರಿ

0
Spread the love

ಮಂಡ್ಯ: ರಾಜ್ಯ ಸರ್ಕಾರಕ್ಕೆ ಸದ್ಯದಲ್ಲೇ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು  ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ನಮ್ಮ ನಾಯಕರನ್ನ ಒಗ್ಗೂಡಿಸಿ ಕೆಲವೇ ದಿನಗಳಲ್ಲಿ ಪರಿಹಾರ ಕೊಡುತ್ತಾರೆ.

Advertisement

ಆದಷ್ಟು ಬೇಗ ಈ ಸಮಸ್ಯೆ ಸರಿಪಡಿಸುವ ಕೆಲಸ ಆಗುತ್ತೆ. ನಾವೆಲ್ಲರೂ ಒಟ್ಟಾಗಿ ಒಂದಾಗಿ ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಸದ್ಯದಲ್ಲೇ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ನಮ್ಮ ಪಕ್ಷವನ್ನ ಮತ್ತೆ ಶಿಸ್ತಿನ ವ್ಯಾಪ್ತಿಗೆ ತರುತ್ತೇವೆ. ಕಾರ್ಯಕರ್ತರ ನೋವು ನಮ್ಮ ನೋವು ಕೂಡ ಆಗಿದೆ.

ಕೆಲವು ಬಾರಿ ಈ ತರಹದ ಘಟನೆ ಸಹಜ. ಈ ಗೊಂದಲಕ್ಕೆ ಶೀಘ್ರವಾಗಿ ತೆರೆ ಎಳೆಯುತ್ತೇವೆ. ಪ್ರಬಲ ಪಕ್ಷವಾಗಿ ಹೋರಾಟ ಮಾಡುತ್ತೇವೆ. ರಾಜ್ಯದ ಮುಖಂಡತ್ವದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದಾಗ ಆತಂಕ ಆಗುತ್ತೆ. ಆದಷ್ಟೂ ಬೇಗ ಇದಕ್ಕೆಲ್ಲಾ ತೆರೆ ಬೀಳಲಿದೆ ಎಂದರು ಹೇಳಿದರು.


Spread the love

LEAVE A REPLY

Please enter your comment!
Please enter your name here