ಆಯುಧ ಪೂಜೆ ಸಂಭ್ರಮ: ಖರೀದಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಮಂದಿ, ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

0
Spread the love

ಬೆಂಗಳೂರು:- ಕರ್ನಾಟಕ ಸೇರಿ ದೇಶದಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ.

Advertisement

ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಹೂವು, ಹಣ್ಣು ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಈ ಹಿನ್ನೆಲೆ ಟೌನ್‌ಹಾಲ್‌ನಿಂದ ಕೆಆರ್ ಮಾರ್ಕೆಟ್‌ವರೆಗೆ ಟ್ರಾಫಿಕ್ ಬಿಸಿ ತಟ್ಟಿದೆ. ಖರೀದಿಗೆ ಬಂದ ಜನರು ಫ್ಲೈಓವರ್ ಮೇಲೆಯೂ ವಾಹನಗಳನ್ನು ಪಾರ್ಕ್ ಮಾಡಿದ್ದು, ಫ್ಲೈ ಓವರ್ ಮೇಲೆಯೂ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.

ಹೂಗಳ ಇಂದಿನ ದರ:-

ಸೇವಂತಿ: 200-300ರೂ.

ಕನಕಾಂಬರ: 2000-2500 ರೂ.

ಮಲ್ಲಿಗೆ: 1500-2000 ರೂ.

ಗುಲಾಬಿ: 400-450 ರೂ.

ಕಾಕಡ: 800 ರೂ.

ಬಾಳೆಕಂಬ ಜೋಡಿ: 50-70ರೂ.

ಕುಂಬಳಕಾಯಿ: 50-60ರೂ.

ಗುಲಾಬಿ ಹಾರ: 4000 ರೂ.


Spread the love

LEAVE A REPLY

Please enter your comment!
Please enter your name here