ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಘಳಿಸಿರುವ ನಟಿ ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಕಳೆದ ಒಂದೆರಡು ದಿನಗಳ ಹಿಂದಷ್ಟೇ ವೈಷ್ಣವಿ ಗೌಡ ನಟನೆಯ ಸೀತಾ ರಾಮ ಧಾರವಾಹಿ ಮುಕ್ತಾಯಗೊಂಡಿದ್ದು ಇದೀಗ ನಟಿ ಮದುಯಲ್ಲಿ ಮದುವೆಯ ಕಾರ್ಯಗಳು ಆರಂಭವಾಗಿದೆ.
ಇತ್ತೀಚೆಗಷ್ಟೇ ವೈಷ್ಣವಿ ಗೌಡ ಅದ್ದೂರಿಯಾಗಿ ಅನುಕೂಲ್ ಮಿಶ್ರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವೈಷ್ಣವಿ ಸದ್ಯದಲ್ಲೇ ಹಸೆಮಣೆ ಏರಲಿದ್ದು ಹೀಗಾಗಿ ವೈಷ್ಣವಿ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಇಂದು ನಟಿಯ ಮನೆಯಲ್ಲಿ ಸಿಂಪಲ್ ಆಗಿ ಅರಿಶಿಣ ಶಾಸ್ತ್ರ ನೆರವೇರಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬದವರಷ್ಟೇ ಭಾಗಿಯಾಗಿದ್ದಾರೆ.
ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಸನ್ನಿಧಿ ಪಾತ್ರದ ಮೂಲಕ ವೈಷ್ಣವಿ ಗೌಡ ಸಖತ್ ಖ್ಯಾತಿ ಘಳಿಸಿದ್ದರು. ತಮ್ಮ ಉತ್ತಮ ನಟನೆಯ ಮೂಲಕವೇ ಖ್ಯಾತಿ ಘಳಿಸಿದ ನಟಿ ಆ ಬಳಿಕ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾ ರಾಮ ಧಾರವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸಿದ್ದರು. ಇದೀಗ ಧಾರವಾಹಿ ಮುಗಿದ ಬೆನ್ನಲ್ಲೇ ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.