ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಶನಿವಾರ, ಭಾನುವಾರ ಪವರ್ ಸಮಸ್ಯೆ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಪವರ್ ಕಟ್ ಇರಲಿದೆ. ಕಸ್ತೂರಿ ಬಡವಾಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, 1ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, 3ನೇ ಕ್ರಾಸ್, 4ನೇ ಕ್ರಾಸ್, ಸ್ಲಮ್ ರಸ್ತೆ, ಅನು ಸೋಲಾರ್ ರಸ್ತೆ, ಚೈರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಜನರಲ್ ಮೆಟಲ್ ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ, ವೈಷ್ಣವಿ ಮಾಲ್,
ಗೃಹಲಕ್ಷ್ಮಿ ಅಪಾರ್ಟ್‌ಮೆಂಟ್, ಎಸ್‌ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿ.ಜಿ ಪಾಳ್ಯ, ಇಸ್ರೋ, ನಾರಾಯಣಪುರ, ಎನ್.ಟಿ.ಟಿ.ಎಫ್ ಸರ್ಕಲ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ರಾಜೇಶ್ವರಿನಗರ, ಆಕಾಶ್ ಥಿಯೇಟರ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.
ಬ್ಯಾಂಕ್ ಕಾಲೋನಿ, ಮುನೇಶ್ವರ ಲೇಔಟ್, ಎಫ್ಎಫ್ ಲೇಔಟ್, ಎನ್ಎಸ್ ಬಡಾವಣೆ, ಕೆಜಿ ಲೇಔಟ್, ರಾಜೀವ್ ಗಾಂಧಿ ನಗರ ಭಾಗಶಃ, ಚೌಡೇಶ್ವರಿ ನಗರ ಭಾಗಶಃ, ಲಗ್ಗೆರೆ ಹಳೆ ಗ್ರಾಮ ಭಾಗಶಃ, ಪೀಣ್ಯ 4 ನೇ ಹಂತ, 4ನೇ ಮುಖ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.



