ವಿಜಯಸಾಕ್ಷಿ ಸುದ್ದಿ, ಗದಗ : 12ನೇ ಶತಮಾನದ ಶರಣರ ಕಲ್ಯಾಣ ಸಾಮ್ರಾಜ್ಯದಲ್ಲಿ ಬಸವಣ್ಣನವರ ನೇತೃತ್ವದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು ದೇವರು ಕೇಳುವ ಪ್ರಶ್ನೆಗಳಿಗೆ ಸೂಕ್ತ ಮತ್ತು ದಿಟ್ಟ ಉತ್ತರ ನೀಡಿ ಎಲ್ಲಾ ಶರಣರ ಮೆಚ್ಚುಗೆಗೆ ಪಾತ್ರಳಾದ ಶರಣೆ ಅಕ್ಕಮಹಾದೇವಿಯ ವಚನಗಳು ಮಹಿಳೆಯರ ಬದುಕು ಬದಲಿಸುವಂಥವು ಮತ್ತು ಸರ್ವರ ಬದುಕಿಗೆ ತಿರುವು ನೀಡುವಂಥವುಗಳಾಗಿವೆ. ಆದ್ದರಿಂದ ಅಕ್ಕನ ವಚನಗಳ ಜೀವಂತಿಕೆಗೆ ಅವುಗಳ ತತ್ವಾಚರಣೆಗಳು ಬದುಕಿನಲ್ಲಿ ನಮ್ಮ ಉಸಿರಾಗಿರಬೇಕೆಂದು ಗುರುಬಸವ ಸಿ.ಬಿ.ಎಸ್.ಇ. ಶಾಲೆಯ ಯೋಗ ಮತ್ತು ಸಂಗೀತ ಶಿಕ್ಷಕಿ ಸುನಂದಾ ಜ್ಯಾನೋಪಂತರ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಗದಗ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ಕಮಹಾದೇವಿಯ ವಚನ ವಿಶ್ಲೇಷಣೆ ಮಾಡುತ್ತ ಮಹಾದೇವಿಯಕ್ಕ ಇಡೀ ಜೀವನುದ್ದನ್ನೂ ಅನುಭವಿಸಿದ ನೋವು, ಸಂಕಟ, ಅವಮಾನ, ಸುಖ, ದುಃಖಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸುತ್ತ, ಇಂದು ಕೂಡ ಮಹಿಳೆಯರು ನಾನಾ ಸಮಸ್ಯೆಗಳನ್ನು ಎದುರಸುತ್ತಿದ್ದಾರೆ. ಆ ಎಲ್ಲ ಸಮಸ್ಯೆಗಳಿಗೆ ಕಾನೂನು, ಸರಕಾರ, ಸಮಾಜಗಳು ಏನು ಮಾಡುತ್ತಿವೆ, ದಿನದಿನಕ್ಕೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲಿವೆ ಎಂದು ಸಭೆಯಲ್ಲಿನ ಮಹಿಳೆಯರಿಗೆ ಸವಾಲು ಹಾಕಿ, ಮಹಿಳೆಯ ಸರ್ವ ಸಮಸ್ಯೆಗಳಿಗೆ ಶಿವಶರಣರ ವಚನಗಳು ಶಾಶ್ವತ ಪರಿಹಾರಗಳಾಗಿವೆ ಎಂದರು.
ವೇದಿಕೆಯಲ್ಲಿ ಸಾಪ್ತಾಹಿಕ ವಚನ ಶ್ರಾವಣ ಸೇವಾ ಸಮಿತಿಯ ಅಧ್ಯಕ್ಷ ಡಾ. ಎಸ್.ಕೆ. ನಾಲತ್ವಾಡಮಠ, ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮಿ ಆನೆಹೊಸೂರು, ದಾಸೋಹ ಸೇವಾಕರ್ತರರಾದ ವೀಣಾ ಗೌಡರ ಉಪಸ್ಥಿತರಿದ್ದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ತನುಶ್ರೀ ಬದಿ, ಸಂಗೀತಾ ನಾಖೋಡ, ಸುನಂದಾ ಜ್ಯಾನೋಪಂತರ, ವಿಜಯಲಕ್ಷ್ಮಿ ಮೇಕಳಿ, ವೀಣಾ ಗೌಡರ ಇವರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯ ಬಹುಮಾನ ಪ್ರಾಯೋಜಕತ್ವವನ್ನು ಗದಗ-ಬೆಟಗೇರಿ ನಗರಸಭೆ ಪರಿಸರ (ಆರೋಗ್ಯ) ಇಲಾಖೆ ಇಂಜಿನಿಯರ್ ಆನಂದ ಬದಿ ವಹಿಸಿದ್ದರು. ನವೀನ ಪಲ್ಲೇದ ವಚನ ಹೇಳಿದರು. ವಿಜಯಾ ಚನ್ನಶೆಟ್ಟಿ ಕಾರ್ಯಕ್ರಮಗಳ ಕುರಿತು ಅನಿಸಿಕೆ ತಿಳಿಸಿದರು. ಪುಷ್ಪಾ ಕರಕಿಕಟ್ಟಿ ವಚನ ಸಂಗೀತ ಹಾಡಿದರು.
ವೀಣಾ ಗೌಡರಪ್ರಾರ್ಥಿಸಿದರು. ಬಸವರಾಜ ತೋಟಿಗೇರಿ ಸ್ವಾಗತಿಸಿ ಪರಿಚಯಿಸಿದರು. ಡಾ. ಎಂ.ವಿ. ಐಹೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಚೇತನ ಚುಂಚಾ ವಂದಿಸಿದರು. ಗಿರಿಜಾ ನಾಲತ್ವಾಡಮಠ ಮತ್ತು ಸಂಗಡಿಗರು ವಚನ ಮಂಗಲ ಮಾಡಿದರು.
ಕಾರ್ಯಕ್ರಮದಲ್ಲಿ ವಿ.ಎಚ್. ಪಾಟೀಲ, ಅಂದಾನೆಪ್ಪ ವಿಭೂತಿ, ಆಯ್.ಕೆ. ಕಮ್ಮಾರ, ಡಾ. ಎ.ಡಿ. ಹುಳಪಲ್ಲೇ, ಎಸ್.ಎನ್. ಹಕಾರೆ, ಅಮರೇಶ ರಾಂಪೂರ, ಅಂಬಿಕಾ ರೂಡಗೆ, ಜಯಶ್ರೀ ಡಾವಣಗೇರಿ, ಸುಲೋಚನಾ ಐಹೊಳ್ಳಿ, ಕಸ್ತೂರಿ ಮರಿಗೌಡರ, ಶೋಭಾ ಭಾಂಡಗೆ, ಪುಷ್ಪಾ ತಿಪ್ಪಶೆಟ್ಟಿ, ಗಿರಿಜಾ ಅಂಗಡಿ, ಪಾರ್ವತಿ ಭೂಮಾ, ಶಾಂತಾ ಕುಂದಗೋಳ ಇನ್ನಿತರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಮಾತನಾಡಿ, ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಇನ್ನೂ ನಮ್ಮ ಭಾವನೆಗಳು ಬದಲಾಗಿಲ್ಲ. ಸಮಾಜದಲ್ಲಿ ಕಂದಾಚಾರ, ಮೂಢ ನಂಬಿಕೆ, ಅನೀತಿ-ಅತ್ಯಾಚಾರಗಳು ನಡೆಯುತ್ತಲಿವೆ. ಇವುಗಳ ನಿಯಂತ್ರಣಕ್ಕೆ ವಚನ ಶ್ರಾವಣದಂತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.