ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಅಕ್ಟೋಬರ್ 23ರಂದು ಆರಂಭವಾಗುವ ಕಿತ್ತೂರ ಉತ್ಸವದ ಅಂಗವಾಗಿ ಆಗಮಿಸಿದ ರಾಣಿ ಚನ್ನಮ್ಮಳ ಜ್ಯೋತಿಯನ್ನು ಲಕ್ಕುಂಡಿ ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು.
Advertisement
ದಂಡಿನ ದುರ್ಗಾದೇವಿ ದೇವಸ್ಥಾನದ ಹತ್ತಿರ ಜ್ಯೋತಿಗೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ, ಸ್ವಾಗತಿಸಿ, ಅತ್ತಿಮಬ್ಬೆ ಮಹಾದ್ವಾರದವರೆಗೆ ಮೆರವಣಿಗೆಯೊಂದಿಗೆ ಬಿಳ್ಕೋಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ಚಿನ್ನಗುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜು ಕಂಠಿಗೊಣ್ಣವರ, ಕೃಷಿ ಇಲಾಖೆ ಅಧೀಕ್ಷಕ ಶರಣಯ್ಯ ಪಾರ್ವತಿಮಠ ಸೇರಿದಂತೆ ಗ್ರಾಮದ ಗಣ್ಯರು, ಮಹಿಳೆಯರು ಪಾಲ್ಗೊಂಡಿದ್ದರು.