ರಾಯಚೂರು:- ಜಿಲ್ಲೆಯ ಲಿಂಗಸುಗೂರಿನ ಐದನಾಳ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿ 21 ವರ್ಷದ ಯುವಕ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ಗಣೇಶ ಮೃತ ದುರ್ದೈವಿ. ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ಮದ್ಯಪಾನ ಮಾಡಿದ್ದ. ಕುಡಿದ ಅಮಲಿನಲ್ಲಿ ಬಾವಿಯ ಬಳಿ ತೆರಳಿದಾಗ ಕಾಲು ಜಾರಿ ಬಾವಿಗೆ ಬಿದ್ದು, ಸಾವನ್ನಪ್ಪಿರುವುದಾಗಿ ಸ್ನೇಹಿತರು ಗ್ರಾಮಸ್ಥರಿಗೆ ತಿಳಿಸಿದ್ದಾರೆ.ಮೃತನ ಕುಟುಂಬಸ್ಥರಿಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಮಾಡುವ ಉದ್ದೇಶದಿಂದಲೇ ಪಾರ್ಟಿ ಮಾಡಲು ಕರೆದೊಯ್ದ ಬಾವಿಗೆ ತಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಮೃತ ಗಣೇಶನ ತಂದೆ ಲಿಂಗಸಗೂರು ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.