ಬೆಂಗಳೂರು :- LPG ಬಳಕೆದಾರರಿಗೆ ಶಾಕಿಂಗ್ ಸುದ್ದಿ ಸಿಕ್ಕಿದ್ದು, ಸಿಲಿಂಡರ್ ದರ ದಿಢೀರ್ ಏರಿಕೆ ಕಂಡಿದೆ.ದಸರಾ, ದೀಪಾವಳಿ ಸಂಭ್ರಮದಲ್ಲಿದ್ದ ಜನರಿಗೆ LPG ಶಾಕ್ ನೀಡಿದೆ. ಕಳೆದ ಮೂರು ತಿಂಗಳಿನಿಂದ ಕಮರ್ಷಿಯಲ್ ಸಿಲಿಂಡರ್ ದರ ಸತತ ಏರಿಕೆ ಕಾಣುತ್ತಿದೆ. ಇಂದಿನಿಂದ 19 ಕೆ.ಜಿ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದಲ್ಲದೆ ಜಾರಿಗೂ ಬಂದಿದೆ. ಬೆಂಗಳೂರಿನಲ್ಲಿ 48.50 ರೂ ದರ ಏರಿಕೆ ಕಂಡಿದೆ.
Advertisement
ಕಳೆದ ಆಗಸ್ಟ್ನಲ್ಲಿ 9 ರೂಪಾಯಿ, ಸೆಪ್ಟೆಂಬರ್ನಲ್ಲಿ 39 ರೂಪಾಯಿ ಏರಿಕೆ ಕಂಡಿತ್ತು. ಈಗ ಮತ್ತೆ ಅಕ್ಟೋಬರ್ ಆರಂಭದಲ್ಲೇ 48 ರೂಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲಬೆಲೆ, ತೆರಿಗೆ ನೀತಿ ಹಿನ್ನೆಲೆ ದರ ಏರಿಕೆಯಾಗಿದೆ. ಒಟ್ಟಿನಲ್ಲಿ 1818 ರೂ.ಗೆ ವಾಣಿಜ್ಯ ಸಿಲಿಂಡರ್ ಖರೀದಿಸುವಂತಾಗಿದೆ.