ವೆಸ್ಟ್ ಇಂಡೀಸ್ ಕ್ರಿಕೆಟಿಗನ ಅಬ್ಬರ: ಮ್ಯಾಕ್ಸ್​ವೆಲ್ ವಿಶ್ವ ದಾಖಲೆ ಉಡೀಸ್!

0
Spread the love

ವೆಸ್ಟ್ ಇಂಡೀಸ್ ಕ್ರಿಕೆಟಿಗ ಆ್ಯಂಡ್ರೆ ರಸೆಲ್ ಆರ್ಭಟಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಅವರ ವಿಶ್ವ ದಾಖಲೆ ಉಡೀಸ್ ಆಗಿದೆ.

Advertisement

ದುಬೈನಲ್ಲಿ ನಡೆಯುತ್ತಿರುವ ಇಂಟರ್​ನ್ಯಾಷನಲ್​ ಲೀಗ್ ಟಿ20 ಟೂರ್ನಿಯಲ್ಲಿ ಅಬುಧಾಬಿ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಆ್ಯಂಡ್ರೆ ರಸೆಲ್ ಈವರೆಗೆ 130 ರನ್​​ ಕಲೆಹಾಕಿದ್ದಾರೆ. ಈ 130 ರನ್​ಗಳೊಂದಿಗೆ ರಸೆಲ್ ಟಿ20 ಕ್ರಿಕೆಟ್​ನಲ್ಲಿ 9000 ರನ್​ ಪೂರೈಸಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ 9000+ ರನ್ ಕಲೆಹಾಕಿರುವುದು ಕೇವಲ 25 ಬ್ಯಾಟರ್​​ಗಳು ಮಾತ್ರ. ಇವರಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 9 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಇದೀಗ ಆ್ಯಂಡ್ರೆ ರಸೆಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮ್ಯಾಕ್ಸ್​ವೆಲ್ ಹೆಸರಿನಲ್ಲಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಆ್ಯಂಡ್ರೆ ರಸೆಲ್ ಯಶಸ್ವಿಯಾಗಿದ್ದಾರೆ.

ಆ್ಯಂಡ್ರೆ ರಸೆಲ್ 9 ಸಾವಿರ ರನ್​ಗಳನ್ನು ಕಲೆಹಾಕಲು ತೆಗೆದುಕೊಂಡಿರುವುದು ಕೇವಲ 5321 ಎಸೆತಗಳನ್ನು ಮಾತ್ರ. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ವೇಗವಾಗಿ 9000 ರನ್ ಕಲೆಹಾಕಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here