Almonds: ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನ? ಇಲ್ಲಿದೆ ಮಾಹಿತಿ

0
Spread the love

ಬಾದಾಮಿ ಪೋಷಕಾಂಶವುಳ್ಳ ಪದಾರ್ಥ. ಬಾದಾಮಿಯಿಂದ ನಮ್ಮ ಚರ್ಮಕ್ಕೆ ಹಲವು ಪ್ರಯೋಜನಕಾರಿ ಅಂಶಗಳಿವೆ. ಇದರಲ್ಲಿರು ವಿಟಮಿನ್ ಇ, ಆಂಟಿಆಕ್ಸಿಡೆಂಟ್ಸ್, ಆರೋಗ್ಯಕರ ಕೊಬ್ಬು ನಿಮ್ಮ ಚರ್ಮವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬಾದಾಮಿ ಚರ್ಮವನ್ನು ತೇವಗೊಳಿಸಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ.

Advertisement

ಬಾದಾಮಿ ತಿನ್ನುವುದರಿಂದ ಅಪಾರ ಪ್ರಯೋಜನಗಳು
ಬಾದಾಮಿ ವಿಟಮಿನ್ ಇ ಮತ್ತು ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಒಮೆಗಾ 6 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬಾದಾಮಿಯಲ್ಲಿರುವ ಪ್ರೋಟೀನ್ ಹೊಟ್ಟೆಯನ್ನು ಹೆಚ್ಚು ಸಮಯ ತುಂಬಿಡಲು ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಕ್ಯಾಲೊರಿ ಸೇವನೆಯಿಂದ ನಿಮ್ಮನ್ನು ರಕ್ಷಿಸುತ್ತದೆ.

  • ತೂಕ ನಷ್ಟದಲ್ಲಿ ಬಾದಾಮಿಯ ನೇರ ಪರಿಣಾಮ ಕಂಡುಬರುತ್ತದೆ. ಇದಲ್ಲದೆ, ಬಾದಾಮಿ ನಿಮ್ಮ ಎಲುಬುಗಳನ್ನು ಬಲಪಡಿಸುವುದರ ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದುದದಿಂದ ಪ್ರತಿದಿನ ಬಾದಾಮಿಯನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
  • ನೆನೆಸಿದ ಬಾದಾಮಿ ಜೀರ್ಣಿಸಿಕೊಳ್ಳಲು ತುಂಬಾ ಸುಲಭ, ಆದ್ದರಿಂದ ಅವು ನಿಮ್ಮ ದೇಹಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುತ್ತವೆ.
  • ನೆನೆಸಿದ ಬಾದಾಮಿ ಆರೋಗ್ಯಕರ ಲಘು ಆಹಾರವಾಗಿ ಬಹಳ ಪ್ರಯೋಜನಕಾರಿಯಾಗಿದೆ ಮತ್ತು ಪರಿಣಾಮಕಾರಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
  • ನೆನೆಸಿದ ಬಾದಾಮಿ ವಿಟಮಿನ್ ಬಿ 17 ಅನ್ನು ಹೊಂದಿರುತ್ತದೆ, ಇದು ಕ್ಯಾನ್ಸರ್ ರೋಗಿಗಳಿಗೆ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.
  • ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಅವು ಸಹಾಯ ಮಾಡುತ್ತವೆ ಮತ್ತು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುತ್ತವೆ.
  • ಬಾದಾಮಿಯಲ್ಲಿರುವ ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

 

 


Spread the love

LEAVE A REPLY

Please enter your comment!
Please enter your name here