ರಾಜ್ ಬಿ ಶೆಟ್ಟಿ ನಟನೆಯ ‘ಸು ಫ್ರಮ್ ಸೋ’ ಬಾಕ್ಸ್ ಆಫೀಸ್ ದಾಖಲೆಗಳನ್ನು ಊಡಿಸ್ ಮಾಡ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಚಿತ್ರ ಈಗಾಗಲೇ 70 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ನೂರು ಕೋಟಿ ಕ್ಲಬ್ ಸೇರಲಿದೆ ಎಂದು ಅಂದಾಜಿಸಲಾಗಿದೆ. ಈ ಮಧ್ಯೆ ‘ಸು ಫ್ರಮ್ ಸೋ’ ಸಿನಿಮಾದ ಸೀಕ್ವೆಲ್ ಬಗ್ಗೆ ರಾಜ್ ಬಿ ಶೆಟ್ಟಿ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ತೆಲುಗು ಭಾಷೆಯಲ್ಲಿ ‘ಸು ಫ್ರಮ್ ಸೋ’ ರಿಲೀಸ್ ಆಗಿದೆ. ಮೈತ್ರಿ ಮೂವೀ ಮೇಕರ್ಸ್ ತಂಡದವರು ಈ ಚಿತ್ರವನ್ನು ಹಂಚಿಕೆ ಮಾಡಿದ್ದು, ಅವರ ಕಡೆಯಿಂದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸುದ್ದಿಗೋಷ್ಠಿ ವೇಳೆ ರಾಜ್ ಅವರಿಗೆ ‘ಸು ಫ್ರಮ್ ಸೋ’ ಚಿತ್ರದ ಸೀಕ್ವೆಲ್ ಬಗ್ಗೆ ಕೆಲ ಪ್ರಶ್ನೆಗಳು ಎದುರಾಗಿದ್ದು ಅವುಗಳಿಗೆ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ.
ನಟನೆಯ ‘ಸು ಫ್ರಮ್ ಸೋ’ ಸೀಕ್ವೆಲ್ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ ಬಿ ಶೆಟ್ಟಿ, ‘ಸೀಕ್ವೆಲ್ ಬಗ್ಗೆ ನನಗೆ ನಂಬಿಕೆ ಇಲ್ಲ. ನಾನು ಮೊದಲು ಬರಹಗಾರ ಆ ಬಳಿಕ ನಿರ್ದೇಶಕ ಹಾಗೂ ನಟ. ನಾನು ಈಗಾಗಲೇ ನೋಡಿದ್ದರ ಬಗ್ಗೆ ಪ್ಯಾಷನೇಟ್ ಆಗಿರಲು ಸಾಧ್ಯವಿಲ್ಲ. ನನ್ನ ನಿರ್ದೇಶಕರು ನನ್ನ ಮನ ಒಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ನೀವು ಬೇಕಿದ್ದರೆ ಬೇರೆಯವರ ಜೊತೆ ಮಾಡಿಕೊಳ್ಳಿ. ನಾನು ಅದನ್ನು ತಡೆಯಲ್ಲ. ನಾನು ಬರೋದಿಲ್ಲ ಎಂದು ಹೇಳಿದೆ’ ಎಂದಿದ್ದಾರೆ.


