RCB ತಂಡದ ನೂತನ ಕ್ಯಾಪ್ಟನ್ ಆಗಿ ರಜತ್ ಪಾಟಿದಾರ್ ಅವರು ಆಯ್ಕೆ ಆಗಿದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇನ್ನೇನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಹೇಗಾದ್ರೂ ಮಾಡಿ ಈ ಸಲ ಕಪ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಿದ್ದಿಗೆ ಬಿದ್ದಿದೆ. ಹಾಗಾಗಿ ಈ ಸೀಸನ್ನಲ್ಲಿ ಆರ್ಸಿಬಿಯನ್ನು ಲೀಡ್ ಮಾಡೋದು ಯಾರು? ಅನ್ನೋ ಚರ್ಚೆ ಜೋರಾಗಿತ್ತು. ಕ್ಯಾಪ್ಟನ್ಸಿ ರೇಸ್ನಲ್ಲಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿದ್ದವು. ಈ ಎಲ್ಲಾ ಚರ್ಚೆಗಳಿಗೂ ತೆರೆ ಎಳೆದಿರೋ ಆರ್ಸಿಬಿ ಸ್ಟಾರ್ ಪ್ಲೇಯರ್ ರಜತ್ ಪಾಟಿದಾರ್ ಅವರಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಿದೆ.
ನೂತನ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದಂತೆ ಮಾತನಾಡಿದ ರಜತ್ ಪಾಟಿದಾರ್ ಅವರು, ವಿರಾಟ್ ಅವರನ್ನು ಹಾಡಿ ಹೊಗಳಿದ್ದಾರೆ. ವಿರಾಟ್ ಭಾಯ್ ಆರ್ಸಿಬಿ ತಂಡದ ಲೀಡರ್. ಇವರ ಅನುಭವ ಮತ್ತು ಆಲೋಚನೆಗಳು ನನ್ನ ಕ್ಯಾಪ್ಟನ್ಸಿಗೆ ಸಹಾಯ ಮಾಡಲಿವೆ. ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಕೊಹ್ಲಿ ಒಬ್ಬರು. ಇವರಿಂದ ಸಾಕಷ್ಟು ಕಲಿತಿದ್ದೇನೆ. ಅದು ನನ್ನ ಅದೃಷ್ಟ ಎಂದರು.
ಕಳೆದ ವರ್ಷವೇ ನನಗೆ ಕೋಚ್ ಆ್ಯಂಡಿ ಫ್ಲವರ್ ಅವರು ಆರ್ಸಿಬಿ ಕ್ಯಾಪ್ಟನ್ ಆಗೋ ಪ್ಲಾನ್ ಇದ್ಯಾ ಎಂದು ಕೇಳಿದರು. ನಾನು ಮೊದಲು ಮಧ್ಯಪ್ರದೇಶವನ್ನು ಲೀಡ್ ಮಾಡುವ ಮೂಲಕ ಇನ್ನೂ ಸಾಕಷ್ಟು ಕಲಿಯಬೇಕಿದೆ. ಆಗ ಮಾತ್ರ ನಾನು ಆರ್ಸಿಬಿ ಕ್ಯಾಪ್ಟನ್ ಆಗಲು ಸಾಧ್ಯ ಎಂದೆ. ಅಂದೇ ನನಗೆ ಆರ್ಸಿಬಿ ಕ್ಯಾಪ್ಟನ್ ಆಗೋ ಸುಳಿವು ಸಿಕ್ಕಿತ್ತು. ನನಗೆ ತಂಡದ ನಾಯಕನ ಜವಾಬ್ದಾರಿ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂದರು.