ಬೆಂಗಳೂರು:- ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್‌ಗೆ ಪೊಲೀಸರು ವಿಚಾರಣೆಗೆ ನೋಟಿಸ್ ಕೊಟ್ಟಿರುವ ವಿಚಾರಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್ ವಿಚಾರಣೆ ಆಗುತ್ತಿದೆ. ಅದರ ಬಗ್ಗೆ ಸರ್ಕಾರ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ. ವಿಚಾರಣೆಗೆ ನೋಟಿಸ್ ಕೊಟ್ಟಿದ್ದರೆ ಅದಕ್ಕೆ ನಾನೇನು ಹೇಳಬೇಕು. ಬಿಟ್‌ಕಾಯಿನ್ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಗಳಿಗೆ ಯಾರನ್ನು ವಿಚಾರಣೆ ಮಾಡಬೇಕು ಅಂತ ಅನ್ನಿಸುತ್ತದೆ ಅವರನ್ನು ವಿಚಾರಣೆ ಮಾಡ್ತಾರೆ. ಅದರಲ್ಲಿ ನಲಪಾಡ್ ಕೂಡಾ ಒಬ್ಬರು. ಅವರನ್ನು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಲಪಾಡ್ ಮತ್ತು ಶ್ರೀಕಿ ನಡುವೆ ಸಂಬಂಧ ಇದೆಯಾ ಇಲ್ಲವಾ? ಎನ್ನುವುದನ್ನು ತನಿಖೆ ಮಾಡುತ್ತಾರೆ. ಇನ್ವೆಸ್ಟಿಗೇಷನ್ ಅಂದರೆ ಅದೇ ತಾನೆ. ಯಾರಿಗೆ ಸಂಬಂಧ ಇದೆ, ಇಲ್ಲವಾ? ಹಣಕಾಸು ವ್ಯವಹಾರ ಇದೆಯಾ, ಇಲ್ಲವಾ? ಎಲ್ಲವನ್ನು ತನಿಖೆ ಮಾಡುತ್ತಾರೆ. ತನಿಖೆ ನಡೆಯುತ್ತಿರುವಾಗ, ಒಬ್ಬರನ್ನು ವಿಚಾರಣೆಗೆ ಕರೆದಾಗ ಸರ್ಕಾರ ಉತ್ತರ ಕೊಡಲು ಆಗುವುದಿಲ್ಲ. ಸಂಪೂರ್ಣವಾಗಿ ತನಿಖೆ ಆಗಲಿ. ಬಳಿಕ ಎಲ್ಲಾ ಮಾಹಿತಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.