ಪ್ರೇಯಸಿ ಜತೆ ಇರುವಾಗಲೇ ಸಿಕ್ಕಿಬಿದ್ದ ಗಂಡನನ್ನ ಲಾಕ್ ಮಾಡಿದ ಹೆಂಡತಿ ಮಾಡಿದ್ದೇನು!?

0
Spread the love

ರಾಯಚೂರು:– ಇಬ್ಬರು ಹೆಡ್ ಕಾನ್ಸ್ ಟೇಬಲ್ ಆಗಿರುವ ಗಂಡ ಹೆಂಡತಿ ಚೆನ್ನಾಗಿ ಜೀವನ ಮಾಡುತ್ತಿದ್ದರು. ಆದ್ರೆ, ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್ ಬೇರೆ ಹೆಣ್ಮಗಳ ಪ್ರೀತಿಯ ಬಲೆಗೆ ಬಿದ್ದಿದ್ದು, ಇದೀಗ ರಾಜ್ ಮೊಹಮ್ಮದ್ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡುವಾಗಲೇ ಹೆಂಡ್ತಿ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

Advertisement

ಹೆಡ್​ಕಾನ್ಸ್​ಟೇಬ್ ರಾಜ್ ಮೊಹಮ್ಮದ್, ಪ್ರೇಯಸಿ ಜೊತೆ ಇದ್ದಾಗಲೇ ಸಿಕ್ಕಿಬಿದ್ದಿದ್ದಾರೆ. ತನ್ನ ಪತಿ ಪ್ರೇಯಸಿ ಜೊತೆ ಇರುವುದನ್ನು ರೆಡ್​ಹ್ಯಾಂಡ್​ ಆಗಿ ಲಾಕ್ ಮಾಡಿದ ಪತ್ನಿ ಪ್ಯಾರಿ ಬೇಗಂ, ಬಳಿಕ ಎಸ್​​ಪಿಗೆ ಕರೆ ಮಾಡಿ ದೂರು ನೀಡಿದ್ದಾರೆ

ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಮನೆಯೊಂದರಲ್ಲಿ ಜರುಗಿದೆ. ರಾಜ್ ಮೊಹಮ್ಮದ್ , ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿದ್ದ ಎಂದು ಆರೋಪಿಸಲಾಗಿದೆ. ಆದ್ರೆ, ಈ ಬಾರಿ ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್, ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಇರುವಾಗಲೇ ಪತ್ನಿ ಪ್ಯಾರಿ ಬೇಗಂ ಲಾಕ್ ಮಾಡಿದ್ದು, ಬಳಿಕ ಕರೆ ಮಾಡಿ ಎಸ್​​ಪಿಗೆ ದೂರು ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿ ಮನೆ ಲಾಕ್​ ಓಪನ್ ಮಾಡಿ ಬಳಿಕ ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್ ಮತ್ತು ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸುತ್ತಮುತ್ತಲಿನ ಜನರು ಜಮಾವಣೆಗೊಂಡಿದ್ದರು.

ಈ ಹಿಂದೆ ಎರಡು ಬಾರಿ ಹಿರಿಯ ಅಧಿಕಾರಿಗಳು ರಾಜ್ ಮೊಹಮ್ಮದ್​ಗೆ ಬೈದು ಬುದ್ದಿ ಹೇಳಿದ್ದರು. ಆದ್ರೆ, ರಾಜ್ ಮೊಹಮ್ಮದ್ ತನ್ನ ಚಾಳಿ ಹಳೇ ಚಾಳಿ ಮಾತ್ರ ಬಿಟ್ಟಿಲ್ಲ. ಈ ಹಿಂದೆ ಹಲವರು ತಿಳುವಳಿಕೆ ಹೇಳಿದ್ದರೂ ಸಹ ಮತ್ತೆ ಅದೇ ರಾಗ ಮುಂದುವರೆಸಿರುವ ರಾಜ್ ಮೊಹಮ್ಮದ್ ವಿರುದ್ಧ ಪತ್ನಿ ದೂರು ನೀಡಲು ಮುಂದಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here