ಬೆಂಗಳೂರು: ಸಿದ್ದರಾಮಯ್ಯ ಏನ್ ದ್ವೇಷ ಮಾಡ್ತಾರೆ. ನಾವೇನ್ ಮಾಡ್ತೀವಿ ಎಂದು ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಹೆಚ್‌ಡಿಕೆ ಭೂಮಿ ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಹೇಳಿಕೆಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು,
Advertisement
ನೋಡ್ರಿ ಇಡಿ ದೇಶಕ್ಕೆ ಗೊತ್ತು, ನಾವ್ಯಾರಾದರೂ ಕೇಸ್ ಹಾಕಿದ್ದೇವಾ? ಹದಿನೈದು- ಇಪತ್ತು ವರ್ಷದಿಂದ ಆ ಹಿರೇಮಠ ನನ್ಮೇಲೂ ಕೇಸ್ ಹಾಕಿದ್ದಾರೆ. ಅವರ ಮೇಲೆಯೂ ಕೇಸ್ ಹಾಕಿದ್ದಾರೆ. ಕುಮಾರಸ್ವಾಮಿ ಯಾಕೆ ಗಾಬರಿ ಮಾಡ್ಕೋಬೇಕು ಅಂತಾ ತಿರುಗೇಟು ನೀಡಿದರು.
ಏನ್ ದ್ವೇಷದ ರಾಜಕಾರಣ ಮಾಡುತ್ತಾರೆ? ಕೋರ್ಟ್ ಆಫೀಸರ್‌ಗೆ ನಿರ್ದೇಶನ ನೀಡಿದೆ. ಈ ಹಿಂದೆಯೂ ಲೋಕಾಯುಕ್ತದಲ್ಲಿ ಎಲ್ಲಾ ಕೇಸ್ ನಡೆದಿರೋದು ನೆನಪಿದೆ. ಸಿದ್ದರಾಮಯ್ಯ ಏನ್ ದ್ವೇಷ ಮಾಡ್ತಾರೆ. ನಾವೇನ್ ಮಾಡ್ತೀವಿ ಅಂತಾ ಕಿಡಿಕಾರಿದ್ರು.