RCB ಸೇರಿದ ಮೇಲೆ ಏನಾಯ್ತು!? ಸ್ಪಿನ್ ಎದುರು ಪ್ಲಾಫ್ ಶೋ! ‘ಬೆಂಗಳೂರಿಗೆ’ ಟೆನ್ಷನ್ ತಂದ ಆಂಗ್ಲರು!

0
Spread the love

ಟೀಮ್​ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಹೈವೋಲ್ಟೆಜ್​ ಟಿ20 ಸರಣಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

Advertisement

ಗೆಲುವು ಟೀಮ್ ಇಂಡಿಯಾದ್ದೆ ಆದರೂ ಆರ್​​ಸಿಬಿ ಮ್ಯಾನೇಜ್​ಮೆಂಟ್​​, ಫ್ಯಾನ್ಸ್​ಗೆ ಮಾತ್ರ ಬೇಸರ ಮೂಡಿಸಿದೆ. ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್​ಮನ್​ಗಳನ್ನ ಖರೀದಿಸಿದ್ವಿ ಅಂತಾ ಬೀಗುತ್ತಿದ್ದ RCB ಪ್ರಾಂಚೈಸಿಗೆ ವಿದೇಶಿ ಆಟಗಾರರು ಶಾಕ್ ಕೊಟ್ಟಿದ್ದಾರೆ.

ಇಂಡೋ-ಇಂಗ್ಲೆಂಡ್​ ನಡುವಿನ ಟಿ20 ಸರಣಿಯ ಫಸ್ಟ್​ ಮ್ಯಾಚೇ ಫ್ಯಾನ್ಸ್​​ಗೆ ಸಖತ್​ ಕಿಕ್​ ಕೊಟ್ಟಿದೆ. ಈಡನ್​ ಗಾರ್ಡನ್​ನಲ್ಲಿ ಟೀಮ್​ ಇಂಡಿಯಾದ ಆಲ್​​ರೌಂಡ್​​ ಆಟಕ್ಕೆ ಇಂಗ್ಲೆಂಡ್​​ ತಂಡ ತಬ್ಬಿಬ್ಬಾಗಿ ಹೋಗಿದೆ. ಫಸ್ಟ್​ ಹಾಫ್​ನಲ್ಲಿ ಆಂಗ್ಲ ಬ್ಯಾಟರ್​ಗಳನ್ನ ಇಂಡಿಯನ್​​ ಬೌಲರ್ಸ್​ ಗಿರ್​​ಗಿಟ್ಲೆ ಆಡಿಸಿದ್ರೆ, ಸೆಕೆಂಡ್​ ಹಾಫ್​ನಲ್ಲಿ ​ ಇಂಡಿಯನ್​ ಬ್ಯಾಟರ್ಸ್​ ಇಂಗ್ಲೆಂಡ್​ ಬೌಲರ್​ಗಳ ಬೆಂಡೆತ್ತಿದರು.

ಫಸ್ಟ್ ಟಿ20 ಫೈಟ್​ ಅಂತ್ಯವಾಗಿದ್ದೂ ಆಯ್ತು, ಟೀಮ್​ ಇಂಡಿಯಾ ಗೆದ್ದಿದ್ದೂ ಆಯ್ತು. ಆದ್ರೆ, ಸೋತ ಇಂಗ್ಲೆಂಡ್​​ಗಿಂತ ಹೆಚ್ಚು ಟೆನ್ಶನ್​ ಆರ್​​ಸಿಬಿ ಕ್ಯಾಂಪ್​ನಲ್ಲಿ ಸ್ಟಾರ್ಟ್​ ಆಗಿದೆ. ಅಭಿಮಾನಿಗಳು ಮ್ಯಾನೇಜ್​ಮೆಂಟ್​ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಬ್ಯಾಟ್ಸ್​ಮನ್​ಗಳ ವೀಕ್​ನೆಸ್​ ಅನ್ನ ಮತ್ತೊಮ್ಮೆ ಬಟಾಬಯಲು ಮಾಡಿದೆ. ವಿಶ್ವ ಶ್ರೇಷ್ಠ ತಂಡವಾಗಿದ್ರೂ ಆಂಗ್ಲರ ಆಟ ಭಾರತದಲ್ಲಿ ಅದ್ರಲ್ಲೂ ಸ್ಪಿನ್ನರ್​ಗಳ ಎದುರು ನಡೆಯಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಆಂಗ್ಲ ಬ್ಯಾಟ್ಸ್​ಮನ್​ಗಳ ಆನ್​ ಫೀಲ್ಡ್​ನ ವೈಫಲ್ಯ ಆರ್​​ಸಿಬಿಯ ಹರಾಜಿನ ಸ್ಟ್ರಾಟರ್ಜಿ ಮಕಾಡೆ ಮಲಗಿಸಿದೆ.

ಆರ್​​ಸಿಬಿ ಖರೀದಿಸಿರೋ ಫಿಲ್​ ಸಾಲ್ಟ್​ ಕಳೆದ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಕೆಕೆಆರ್​​​ ಪರ ರನ್​ ಸುನಾಮಿ ಸೃಷ್ಟಿಸಿದ್ರು. ಆದ್ರೆ, ಆ ಸೀಸನ್​ನಲ್ಲೂ ಸ್ಪಿನ್ನರ್​ಗಳ ಎದುರು ಸಾಲ್ಟ್​ ಆಟ ನಡೆದಿರಲಿಲ್ಲ. ಸ್ಪಿನ್​​ ಎದುರು ಕೇವಲ 27.50 ಸರಾಸರಿಯನ್ನ ಸಾಲ್ಟ್​ ಹೊಂದಿದ್ರು.

ಇನ್ನೂ ಮತ್ತೋರ್ವ ಬ್ಯಾಟರ್ ಲಿವಿಂಗ್​​ಸ್ಟೋನ್​ ಕತೆಯೂ ಇದೇ. ಇಂಡಿಯಾದಲ್ಲಿ ಆಡಿದ 30 ಟಿ20 ಇನ್ನಿಂಗ್ಸ್​ಗಳಲ್ಲಿ 12 ಬಾರಿ ಸ್ಪಿನ್​ ಬಲೆಗೆ ಬಿದ್ದಿದ್ದಾರೆ. ಕೇವಲ 21.83ರ ರನ್​ಗಳಿಕೆಯ ಸರಾಸರಿ ಹೊಂದಿದ್ದಾರೆ. ಇನ್ನು, ಯುವ ಆಟಗಾರ ಜೇಕಬ್​ ಬೆತೆಲ್​ ಇಂಡಿಯನ್​ ಕಂಡಿಷನ್​ ಹೊಂದಿಕೊಳ್ಳೋಕೆ ಪರದಾಟ ನಡೆಸಿದ್ದಾರೆ.

ಕಳೆದ ಸೀಸನ್​ನಲ್ಲಿ ಸಾಮರ್ಥ್ಯ ಪ್ರೂವ್​ ಮಾಡಿದ್ದ ಹಲವು ಆಟಗಾರರನ್ನ ಆರ್​​ಸಿಬಿ ಈ ಬಾರಿ ಆಕ್ಷನ್​ನಲ್ಲಿ ಬಿಡ್ತು. ಬಿಗ್​ ಪರ್ಸ್​ ಇಟ್ಟುಕೊಂಡು ಅಖಾಡಕ್ಕಿಳಿದಿದ್ದ ಆರ್​​ಸಿಬಿಗೆ ಹಲವು ಇಂಡಿಯನ್​​ ಸ್ಟಾರ್ಸ್​​ನ ಖರೀದಿಸೋ ಅವಕಾಶವಿತ್ತು. ಆದ್ರೆ, ಟೀಮ್​ ಇಂಡಿಯಾ ಬಿಡಿ, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಸಖತ್​​ ಸೌಂಡ್​ ಮಾಡಿದ ಆಟಗಾರರ ಕಡೆಗೂ ಆರ್​​ಸಿಬಿ ಮುಖ ಮಾಡಲಿಲ್ಲ. ಆದ್ರೆ, ಈ ಇಂಗ್ಲೆಂಡ್​ ಆಟಗಾರರ ಹೆಸ್ರು ಬಂದ ಕೂಡಲೇ ಕೋಟಿ ಕೋಟಿ ಹಣವನ್ನ ಸುರಿಯಿತು. ಆಗಲೇ ಫ್ಯಾನ್ಸ್​ ಫ್ರಾಂಚೈಸಿ ಮೇಲೆ ರೊಚ್ಚಿಗೆದ್ದಿದ್ರು. ಇದೀಗ ಇಂಗ್ಲೀಷ್​ ಸ್ಟಾರ್ಸ್​​ ಫೇಲ್​ ಆದ ಮೇಲೆ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.


Spread the love

LEAVE A REPLY

Please enter your comment!
Please enter your name here