ಭಾರತ ಸೇರಿ ಪ್ರತಿಯೊಂದು ದೇಶವು ಬಂಗಾರದ ಮೇಲೆ ತಮ್ಮ ಹೂಡಿಕೆಯನ್ನು ಹೆಚ್ಚಾಗಿಸಿವೆ. ಇದಕ್ಕೆ ಕಾರಣ ಇಷ್ಟೇ, ಪೇಪರ್ ಕರೆನ್ಸಿಗಿಂತ ಚಿನ್ನ ಬಹಳ ನಂಬಿಕೆಗೆ ಅರ್ಹ ಎಂದು. ಈ ನಿಟ್ಟಿನಲ್ಲಿ ಬಂಗಾರದ ಮೇಲಿನ ಖರ್ಚು ಹೆಚ್ಚಾಗಿದೆ, ಬೇಡಿಕೆ ಗಗನಕ್ಕೇರಿದೆ, ಬೆಲೆ ದುಬಾರಿಯಾಗಿದೆ.
ಇಂದು ಸೋಮವಾರ ಚಿನ್ನದ ಬೆಲೆ ಏರಿಕೆ ಆದರೆ, ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 9,140 ರೂ ಇದ್ದದ್ದು 9,155 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 9,988 ರೂ ಮುಟ್ಟಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಇತ್ಯಾದಿ ಕಡೆ 115 ರೂ ಇದ್ದರೆ, ಚೆನ್ನೈ, ಕೇರಳ ಮೊದಲಾದೆಡೆ ದಾಖಲೆಯ 125 ರೂ ಇದೆ.
ಸದ್ಯ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 91,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 99,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 91,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,500 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,550 ರೂ
 - 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,880 ರೂ
 - ಬೆಳ್ಳಿ ಬೆಲೆ 10 ಗ್ರಾಂಗೆ: 1,150 ರೂ
 


