ಬೆಂಗಳೂರು: ಕಮಲ್ ಹಾಸನ್ ಹತ್ತಿರ ಕ್ಷಮೆ ಕೇಳಿ ಎಂದು ಬೇಡಿಕೊಳ್ಳುವ ಅವಶ್ಯಕತೆ ಏನಿದೆ ಎಂದು ಕನ್ನಡಪರ ಹೋರಾಟಗಾರ ಶಿವರಾಮೇಗೌಡ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೇಡಿಕೊಳ್ಳಬೇಡಿ. ಅವನ ಸಿನಿಮಾ ಪ್ರದರ್ಶನ ಮಾಡ್ಬೇಡಿ.
ಕಮಲ್ ಹಾಸನ್ ಕ್ಷಮಾಪಣೆ ನಮಗೆ ಬೇಕಾಗಿಲ್ಲ. ಆದರೆ ನಾಯಕ, ನಟರು ಯಾಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಪ್ಯಾನ್ ಇಂಡಿಯಾ ನಟ ಎಂದು ಘೋಷಣೆ ಮಾಡಿಬಿಡಲಿ ಕನ್ನಡ ನಾಡಿನಲ್ಲಿ ತಮಿಳು ಸಿನಿಮಾಗಳು ನೂರಕ್ಕಿಂತ ಹೆಚ್ಚು ದಿನ ಓಡುತ್ತವೆ.
ಕನ್ನಡದಿಂದ ರಾಜಕುಮಾರ್, ರಾಜಕುಮಾರ್ ಅವರಿಂದ ಕನ್ನಡ ಅಲ್ಲ ಎಂದು ಅವರೇ ಹೇಳಿದ್ದಾರೆ. ಈ ವಿಚಾರವಾಗಿ ಮುಲಾಜೆ ಇಟ್ಟುಕೊಳ್ಳಬಾರದು. ಅವರ ಹತ್ತಿರ ಕ್ಷಮೆ ಕೇಳಿ ಎಂದು ಬೇಡಿಕೊಳ್ಳುವ ಅವಶ್ಯಕತೆ ಏನಿದೆ. ಅವರ ಚಿತ್ರ ಪದರ್ಶನ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.



