ಹೋಳಿ ಹಬ್ಬವನ್ನು ಆಚರಣೆ ಮಾಡುವ ಉದ್ದೇಶ ಏನು? ಕಾಮದೇವನನ್ನು ದಹಿಸೋದೇಕೆ.?

0
Spread the love

ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಈ ಹಬ್ಬವನ್ನು  ತುಂಬಾ ವಿಶಿಷ್ಟ ಹಾಗು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸಿಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ.  ಧರ್ಮ, ದೀಪೋತ್ಸವಗಳು ಮತ್ತು ಬಣ್ಣದ ಸೀಮೆಸುಣ್ಣದ ಸಮೃದ್ಧಿ  ಎಲ್ಲವೂ  ಭಾರತದ ಹೋಳಿ ಹಬ್ಬವು ಪ್ರಪಂಚದ ಅತ್ಯಂತ ಸುಂದರವಾದ ಆಚರಣೆಗಳಲ್ಲಿ ಒಂದಾಗಿದೆ.

Advertisement

ಹೋಳಿಯನ್ನು ಭಾರತದ ಪ್ರತಿ ಭಾಗದಲ್ಲೂ  ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಸಂಭ್ರಮದ ಕ್ಷಣವನ್ನು ಹೋಳಿ ದಿನದಂದು ಆಚರಣೆ  ಮಾಡುತ್ತಾರೆ. ಇದರ ಖುಷಿಗೆ ಮೀತಿಯಿಲ್ಲ. ಹೋಳಿ ಹಬ್ಬಕ್ಕೆ  ಜನಸಾಗರವನ್ನು ಸೇರುವ ಹಬ್ಬ, ಭಾರತದಲ್ಲಿ ಇಂತಹ ಆಚರಣೆಗಳನ್ನು ಮಾತ್ರ ಕಾಣಬಹುದು ಎಂಬುದಕ್ಕೆ ಈ ಹೋಳಿ ಹಬ್ಬ ಸಾಕ್ಷಿಯಾಗಿದೆ.

ಹೋಳಿ ಹಬ್ಬದ ಹಿನ್ನೆಲೆ

ಹಾಗೆ ನೋಡಿದರೆ ಹೋಳಿ ಹಬ್ಬಕ್ಕೆ ಹಲವು ಐತಿಹ್ಯಗಳಿವೆ. ಆದರೆ ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳುವ ದಂತಕಥೆಯೆಂದರೆ ಹೋಳಿ ಹಬ್ಬವನ್ನು ವಿಷ್ಣು ಭಗವಂತನು ಅಸುರ ಹಿರಣ್ಯ ಕಶ್ಯಪುವಿನ ಸಂಹಾರ ಮಾಡಿದುದರ ವಿಜಯದ ಸಂಕೇತವಾಗಿ ಇದನ್ನು ಆಚರಿಸಲಾಗುತ್ತದೆ. ಹಿರಣ್ಯ ಕಶ್ಯಪು ಒಬ್ಬ ಮಹಾನ್ ಹಾಗೂ ಶಕ್ತಿಶಾಲಿ ಅಸುರನಾಗಿದ್ದ. ಅವನನ್ನು ಕಂಡರೆ ಇತರೆ ರಕ್ಕಸರು ಹಾಗಿರಲಿ ದೇವಾನುದೇವತೆಗಳೇ ಹೆದರಿ ನಡುಗುತ್ತಿದ್ದರು. ಹಿರಣ್ಯಕಶ್ಯಪುವಿಗೆ ತನ್ನ ಶಕ್ತಿಯ ಬಗ್ಗೆ ಅಹಂಕಾರ ಎಷ್ಟು ಹೆಚ್ಚಾಯಿತೆಂದರೆ ಭೂಮಿಯಲ್ಲಿ ಅವನನ್ನು ಬಿಟ್ಟು ಬೇರೆ ಯಾರೂ ದೇವರಲ್ಲ, ಬದಲಾಗಿ ಅವನನ್ನೇ ಎಲ್ಲರೂ ದೇವರೆಂದು ಪೂಜಿಸಬೇಕೆಂದು ಆದೇಶಿಸಿದ್ದ.

ಹೋಲಿಕಾಳ ದಹನ

ಆದರೆ ಅವನ ಮಗನಾದ ಪ್ರಹ್ಲಾದನು ವಿಷ್ಣುವಿನ ಅಪ್ರತಿಮ ಭಕ್ತನಾಗಿದ್ದ. ಎಷ್ಟು ಹೇಳಿದರೂ ಆತ ವಿಷ್ಣುವಿನ ಸ್ಮರಣೆ ಬಿಡಲೇ ಇಲ್ಲ. ಕೊನೆಗೆ ತಂದೆ ಹಿರಣ್ಯಕಶ್ಯಪು ಕ್ರೋಧಗೊಂಡು ತನ್ನ ಮಗನನ್ನೇ ಹತ ಮಾಡಲು ಮುಂದಾಗಿ ಪ್ರಯತ್ನಪಟ್ಟ. ಅವನು ಎಷ್ಟೇ ಪ್ರಯತ್ನಿಸಿದರೂ ಅವನ ಮಗ ಬದುಕುಳಿದು ಬಿಡುತ್ತಿದ್ದ. ಆಗ ಹಿರಣ್ಯಕಶ್ಯಪು ತನ್ನ ಸಹೋದರಿಯಾದ ಹೋಲಿಕಾಳ ಸಹಾಯ ಕೇಳಿದ. ಹೋಲಿಕಾಗೆ ಅಗ್ನಿಯು ಎಂದಿಗೂ ಸ್ಪರ್ಶಿಸದಂತೆ ವರವಿತ್ತು. ಹಾಗಾಗಿ ಅವಳು ಕಟ್ಟಿಗೆಯ ರಾಶಿಯ ಮೇಲೆ ಪ್ರಹ್ಲಾದನನ್ನು ಎತ್ತಿಕೊಂಡು ಕುಳಿತಳು. ನಂತರ ಅದಕ್ಕೆ ಬೆಂಕಿ ಇಡಲಾಯಿತು.

ಈ ಸಂದರ್ಭದಲ್ಲೂ ಪ್ರಹ್ಲಾದ ಹರಿನಾಮ ಜಪಿಸುತ್ತಲೇ ಇದ್ದ. ಈಗ ಒಂದು ಪವಾಡವೇ ಅಲ್ಲಿ ನಡೆದು ಹೋಯಿತು. ಅಗ್ನಿ ಸ್ಪರ್ಶವಾಗದಂತಹ ವರ ಹೊಂದಿದ್ದ ಹೋಲಿಕಾಳೇ ಆ ಅಗ್ನಿಯಲ್ಲಿ ದಹಿಸಿ ಹೋದಳು ಹಾಗೂ ಪ್ರಹ್ಲಾದ ಹಾಗೇ ಬದುಕುಳಿದಿದ್ದ. ತದನಂತರ ವಿಷ್ಣು ನರಸಿಂಹನ ಅವತಾರಳ ತಾಳಿ ಹಿರಣ್ಯಕಶ್ಯಪುವಿನ ವಧೆ ಮಾಡಿದ. ಈ ಪ್ರಸಂಗದ ಕುರುಹಾಗಿ ಹೋಳಿ ಹಬ್ಬದ ಆಚರಣೆ ಅಸ್ತಿತ್ವಕ್ಕೆ ಬಂದಿತು ಎನ್ನಲಾಗುತ್ತದೆ.

ಇನ್ನೊಂದು ವಿಶೇಷವೆಂದರೆ, ಹೋಳಿ ಹಬ್ಬದ ಹಿಂದಿನ ದಿನ ಜನರು ಕಟ್ಟಿಗೆಯ ರಾಶಿಯನ್ನು ಹಾಕಿ ದಹಿಸುತ್ತಾರೆ ಹಾಗೂ ಬಾಯಿ ಬಡಿದುಕೊಳ್ಳುತ್ತಾರೆ. ಇದು ಹೋಲಿಕಾ ದಹನದ ಸಂಕೇತವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಈ ಆಚರಣೆಯನ್ನು ಉತ್ತರ ಕರ್ನಾಟಕದ ಭಾಗಗಳಲ್ಲಿ ನೋಡಬಹುದಾಗಿದೆ. ಈ ಹಬ್ಬವು ಒಟ್ಟಾರೆಯಾಗಿ ಎರಡು ದಿನಗಳ ಕಾಲ ಆಚರಿಸಲ್ಪಡುತ್ತದೆ ಹಾಗೂ ಕೆಲವೆಡೆ ಇದನ್ನು ರಂಗಪಂಚಮಿ ಎಂದು ಕರೆಯಲಾಗಿದ್ದು ಐದು ದಿನಗಳ ಕಾಲ ನಡೆಯುತ್ತದೆ.


Spread the love

LEAVE A REPLY

Please enter your comment!
Please enter your name here