RCB ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು: ಯೂಟರ್ನ್‌ ಹೊಡೆದ ಅಂಬಾಟಿ ರಾಯುಡು!

0
Spread the love

ಆರ್​ಸಿಬಿ ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ. ಪ್ರಮುಖ ಸ್ಪೋರ್ಟ್ಸ್​ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಈ ಬಾರಿಯ ಆರ್​ಸಿಬಿ ತಂಡವು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದೆ. ಅದರಲ್ಲೂ ತಂಡ ಅದ್ಭುತವಾಗಿದೆ ಎಂದೆನಿಸುತ್ತಿದೆ ಎಂದಿದ್ದಾರೆ.

Advertisement

ಅಷ್ಟೇ ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ತುಂಬಾ ವಿಶೇಷವಾಗಿದ್ದು, ಏನೋ ಸಾಧಿಸುವ ಹಂಬಲ ಆರ್​ಸಿಬಿ ತಂಡದಲ್ಲಿ ಕಾಣಿಸುತ್ತಿದೆ. ಹೀಗಾಗಿ ಆರ್​ಸಿಬಿ ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಇದಕ್ಕೂ ಮುನ್ನ ಅಂಬಾಟಿ ರಾಯುಡು, ಈ ಬಾರಿ ಆರ್​ಸಿಬಿ ಕಪ್ ಗೆಲ್ಲಬಾರದು ಎಂದಿದ್ದರು. ಅಲ್ಲದೆ ಆರ್​ಸಿಬಿ ತಂಡದ ಸೋಲಿಗೆ ಅವರ ತಂಡದ ಆಯ್ಕೆಯೇ ಕಾರಣ ಎಂದು ದೂರಿದ್ದರು. ಆದರೀಗ ಆರ್​ಸಿಬಿ ತಂಡ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆಲ್ಲುತ್ತಿದ್ದಂತೆ ರಾಯುಡು ತಮ್ಮ ವರಸೆಯನ್ನು ಬದಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here