ಬೆಂಗಳೂರು: ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣ, ನನ್ನ ನೆನಸಿಕೊಂಡಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸಿ.ಟಿ ರವಿಅವರಿಗೆ ಕೋರ್ಟ್ ಜಾಮೀನು ನೀಡಿದ ವಿಚಾರವಾಗಿ ಮಾತನಾಡಿದ ಮಾತನಾಡಿದ ಅವರು, ಬೇಲ್ ವಿಚಾರ ಕೋರ್ಟ್‌ಗೆ ಸಂಬಂಧಿಸಿದ್ದು,
ಕಾನೂನು ಉಂಟು, ಕೋರ್ಟ್ ಉಂಟು, ಅವರು ಉಂಟು ಎಲ್ಲದಕ್ಕೂ ನನ್ನನ್ನ ಕೇಳಿದ್ರೆ ಹೇಗೆ? ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣ, ಅವರ ಪಕ್ಷ, ಹೊರಗಡೆ, ಮನೆ, ಹೊಟ್ಟೆ ಒಳಗೆ ಏನಾದ್ರೂ ಎಲ್ಲದಕ್ಕೂ ನಾನೇ ಕಾರಣ. ನನ್ನ ನೆನಸಿಕೊಂಡಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ ಎಂದು ಹೇಳಿದ್ದಾರೆ.
ಕಾನೂನಿಗೆ, ಕೋರ್ಟ್‌ಗೆ ಏನು ಗೌರವ ಕೊಡಬೇಕೊ ಕೊಡುತ್ತೇವೆ. ಕೋರ್ಟ್ ಏನು ಬೇಕೋ ನಿರ್ಧಾರ ತೆಗೆದುಕೊಳ್ಳುತ್ತೆ. ಮೊದಲು ಅವರು ಮಾತನಾಡಿದ್ದು ಸರೀನಾ ಅಂತ ಕೇಳಿ? ಅವರ ಭಾಷೆ, ಸಂಸ್ಕ್ರತಿಯಿಂದ ಹರುಕು ಬಾಯಿ ಅನ್ನೋದು ಗೊತ್ತಾಗಿದೆ. ಈ ಹಿಂದೆ ಜಯಮಾಲಾಗೂ ಮಾತಾಡಿದ್ರು, ಸಿಎಂ ಬಗ್ಗೆನೂ ಮಾತನಾಡಿದ್ರು, ನಿತ್ಯ ಸುಮಂಗಲಿ ಅಂತ ಹೇಳಿದ್ರು, ಇದು ಸರಿನಾ, ತಪ್ಪಾ? ಎಂದು ಪ್ರಶ್ನಿಸಿದ್ದಾರೆ.