ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾದ ಬಳಿಕವೂ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಮಗುವಿನ ಆರೈಕೆಯ ಜೊತೆಗೆ ಸಿನಿಮಾದ ಕೆಲಸಗಳನ್ನು ತರಿದೂಗಿಸಿಕೊಂಡು ಹೋಗ್ತಿದ್ದಾರೆ. ಆದ್ರೆ ದೀಪಿಕಾಗೆ ಮಾತ್ರ ಒಂದರ ಹಿಂದೊಂದರಂತೆ ಹಿನ್ನಡೆ ಆಗುತ್ತಲೆ ಇದೆ. ಇತ್ತೀಚೆಗೆ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ದೀಪಿಕಾರನ್ನ ತಮ್ಮ ಚಿತ್ರದಿಂದ ತೆಗೆದುಹಾಕಿದ್ದರು. ಇದೀಗ ಮತ್ತೊಂದು ಬಿಗ್ ಬಜೆಟ್ ಚಿತ್ರದಿಂದ ದೀಪಿಕಾ ಅವರನ್ನು ಕೈ ಬಿಡಲಾಗಿದೆ. ಅಲ್ಲದೆ ಚಿತ್ರದ ನಿರ್ದೇಶಕರು ದೀಪಿಕಾ ನಡೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
2023ರಲ್ಲಿ ರಿಲೀಸ್ ಆಗಿದ್ದ ‘ಕಲ್ಕಿ 2898 ಎಡಿ’ ಸಿನಿಮಾ ಹಿಟ್ ಆಗಿದ್ದು ಆ ಬೆನಲ್ಲೇ ಸೀಕ್ವೇಲ್ ತರಲು ನಿರ್ದೇಶಕರು ರೆಡಿಯಾಗಿದ್ದಾರೆ. ಅಲ್ಲದೆ ಈ ಬಗ್ಗೆ ಚಿತ್ರದ ನಟಿ ದೀಪಿಕಾ ಅವರೊಂದಿಗೆ ಮಾತುಕತೆ ನಡೆದಿತ್ತು. ಆದ್ರೆ ಇದೀಗ ಚಿತ್ರತಂಡದಿಂದ ನಟಿ ಹೊರ ಬಂದಿದ್ದು ಈ ಕಾರಣದಿಂದ ಸೀಕ್ವೆಲ್ ಸೆಟ್ಟೇರುವುದು ಅನುಮಾನ ಎನ್ನುವಂತಾಗಿದೆ.
ಚಿತ್ರದಿಂದ ದೀಪಿಕಾ ಹೊರ ಬಂದಿರುವ ಬಗ್ಗೆ ‘ಕಲ್ಕಿ 2898 ಎಡಿ’ ಸಿನಿಮಾ ನಿರ್ಮಾಣ ಮಾಡಿದ ವೈಜಯಂತಿ ಮೂವಿಸ್ ಟ್ವೀಟ್ ಮಾಡಿ, ದೀಪಿಕಾ ಪಡುಕೋಣೆ ಅವರು ಸಿನಿಮಾದ ಭಾಗ ಆಗೋದಿಲ್ಲ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ. ಇತ್ತೀಚೆಗೆ ಪ್ರಭಾಸ್ ಬಗ್ಗೆ ದೀಪಿಕಾ ನೆಗೆಟಿವ್ ಹೇಳಿಕೆ ನೀಡಿದ್ದರು. ಇದರ ಜೊತೆಗೆ ದೀಪಿಕಾ ಅವರು 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದರು. ಈ ಎಲ್ಲಾ ಕಾರಣದಿಂದ ಸಿನಿಮಾದಿಂದ ಅವರನ್ನು ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ.
ಇನ್ನೂ ಈ ಬೆನ್ನಲ್ಲೇ ಟ್ವೀಟ್ ಮಾಡಿರುದ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್, ‘ಏನಾಗಿದೆ ಎಂಬುದನ್ನು ಬದಲಿಸಲು ಸಾಧ್ಯವಿಲ್ಲ. ಆದರೆ, ಮುಂದೆ ಏನಾಗುತ್ತದೆ ಎಂಬುದನ್ನು ಆಯ್ಕೆ ಮಾಡಬಹುದು’ ಎಂದಿದ್ದಾರೆ. ಸದ್ಯ ಈ ಪೋಸ್ಟ್ ಬಗ್ಗೆ ಚರ್ಚೆಗಳು ಶುರುವಾಗಿದೆ.
ಮೊದಲ ಭಾಗಕ್ಕೆ ಪಡೆದ ಹಣಕ್ಕಿಂತ ಶೇ.25ರಷ್ಟು ಹೆಚ್ಚಿನ ಹಣವನ್ನು ದೀಪಿಕಾ ಕೇಳಿದ್ದಾರಂತೆ. ಇಷ್ಟೇ ಅಲ್ಲ, ದಿನಕ್ಕೆ 7-8 ಗಂಟೆ ಮಾತ್ರ ಶೂಟಿಂಗ್ನಲ್ಲಿ ಭಾಗಿ ಆಗೋದಾಗಿ ಹೇಳಿದ್ದಾರಂತೆ. ‘ಕಲ್ಕಿ’ ಅಂತಹ ಸಿನಿಮಾಗಳಿಗೆ ಇಷ್ಟು ಸಣ್ಣ ಮಟ್ಟದ ಸಮಯ ಏನಕ್ಕೂ ಸಾಲುವುದಿಲ್ಲ. ಹೀಗಾಗಿ, ಸಿನಿಮಾದಿಂದ ಅವರನ್ನು ಹೊರಕ್ಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ.


