ಬೆಂಗಳೂರು: ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 19ನೇ ಪುಣ್ಯತಿಥಿ ಆಗಿದ್ದು, ಕುಟುಂಬಸ್ಥರು, ಅಭಿಮಾನಿಗಳು ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸ್ಮಾರಕ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅದರಂತೆ ಶಿವಣ್ಣ ಅಪ್ಪಾಜಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು,
ಒಂದು ಬಾರಿ ಹಚ್ಚೆ ಹಾಕಿಸಿಕೊಂಡ್ರೆ ಹೇಗೆ ಹೋಗೋದಿಲ್ಲೋ ಹಾಗೇ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಹೋಗಲ್ಲ. ಅಪ್ಪಾಜಿ ಮಾಡಿರೋ ಕಲಾ ಸೇವೆಯಿಂದ ಇವತ್ತಿಗೂ ಅಭಿಮಾನ ಹಾಗೆ ಉಳಿಸಿಕೊಂಡಿದೆ.
ರಾಜಕೀಯವಾಗಿ ಯೋಚಿಸದೇ ಗೋಕಾಕ್ ಚಳುವಳಿಯಲ್ಲಿ ಅಪ್ಪಾಜಿ ಭಾಗವಹಿಸಿದ್ದರು. ಸದಾ ನೆಲ, ಜಲ, ಭಾಷೆ ಅಂತಾ ಬಂದಾಗ ಅವರು ಮುಂದೆ ಇರೋರು. ಅದಕ್ಕೂ ದೇವರ ಕೃಪೆ ಬೇಕು. ಇಂತಹ ತಂದೆಗೆ ನಾವು ಮಕ್ಕಳಾಗಿರೋದು ಹೆಮ್ಮೆ ಅನಿಸುತ್ತದೆ.
ಈ ಚಿಕ್ಕ ಮಕ್ಕಳನ್ನ ಕೇಳಿದ್ರು ರಾಜ್‌ಕುಮಾರ್ ಯಾರು ಅಂತಾ ಹೇಳುತ್ತಾರೆ. ಅಪ್ಪಾಜಿ ಪಾಠದ ಹಾಗೆ ಅಭಿಮಾನ ಜಾಸ್ತಿ ಆಗುತ್ತೆ ಹೊರತು ಎಂದಿಗೂ ಕಮ್ಮಿಯಾಗಲ್ಲ. ಇಂದು ಸಂಬಂಧಗಳು ಗಟ್ಟಿಯಾಗಿ ಉಳಿದಿದೆ ಅಂದರೆ ಅಪ್ಪಾಜಿ ಸಿನಿಮಾಗಳೇ ಕಾರಣ ಎಂದಿದ್ದಾರೆ.