ನವದೆಹಲಿ:– ಮಹಾ ಮಹಿಮರನ್ನು ಸ್ಮರಿಸಿದಾಗ ಹೃದಯದಲ್ಲಿ ಹೆಮ್ಮೆ ತುಂಬಿ ಬರುತ್ತೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನ ಆಚರಿಸಿದ್ರು. ಬಳಿಕ ಮಾತಾಡಿ, 79ನೇ ಸ್ವಾತಂತ್ರ್ಯ ದಿನಾಚರಗಲ್ಲು ಸೇರಿ ಅನೇಕ ಘೋರ ಶಿಕ್ಷೆಗಳನ್ನು ಎದುರಿಸಿ ಸ್ವತಂತ್ರ ಭಾರತಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗೈದ ಅಸಂಖ್ಯಾತ ಮಹಾ ಮಹಿಮರನ್ನು ಸ್ಮರಿಸಿದಾಗ ನನ್ನ ಹೃದಯವು ಹೆಮ್ಮೆ ಮತ್ತು ಕೃತಜ್ಞತೆಯಿಂದ ತುಂಬಿ ಬರುತ್ತಿದೆ ಎಂದರು.
ಸರ್ವಸ್ವವನ್ನೂ ತ್ಯಜಿಸಿ ಅತೀವ ಧೈರ್ಯ, ದೃಢ ಸಂಕಲ್ಪದಿಂದ ಹೋರಾಡಿದ ಇವರೆಲ್ಲರ ತ್ಯಾಗದ ಫಲವಾಗಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಜನತಂತ್ರ ಪರಂಪರೆಯ ಭಾಗವಾಗಿ ನಾವು ಜೀವಿಸುತ್ತಿದ್ದೇವೆ. ನಾವೆಲ್ಲರೂ ಇಂದು ನಮ್ಮದೇ ಆಗಿರುವ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಚೈತನ್ಯಶೀಲ ರಾಷ್ಟ್ರದಲ್ಲಿದ್ದೇವೆ. ಇದು ಕೇವಲ ಆಚರಣೆಯ ದಿನವಲ್ಲ, ತಾಯ್ನಾಡು ಗಳಿಸಿದ ಮಹೋನ್ನತ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ನಮ್ಮ ಬದ್ಧತೆ, ಪ್ರತಿಜ್ಞೆಯನ್ನು ಪುನರುಚ್ಚರಿಸುವ ದಿನವಾಗಿದೆ ಎಂದು ಸಚಿವರು ಒತ್ತಿ ಹೇಳಿದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತವು ಸ್ವಾವಲಂಬನೆ, ನಾವೀನ್ಯತೆಗಳ ಮೂಲಕ ಪರಿವರ್ತನಾತ್ಮಕ ಪ್ರಗತಿಯ ಯುಗಕ್ಕೆ ಸಾಕ್ಷಿಯಾಗುತ್ತಿದೆ. ಕೈಗಾರಿಕೆಗಳ ಪುನರುಜ್ಜೀವನದಿಂದ ತಾಂತ್ರಿಕ ಅಭಿವೃದ್ಧಿವರೆಗೆ ಉಕ್ಕು ಕ್ಷೇತ್ರವನ್ನು ಬಲಪಡಿಸಿ ಆತ್ಮನಿರ್ಭರ ಭಾರತ ಪರಿಕಲ್ಪನೆಯ ಮೂಲಕ ಉತ್ಪಾದನಾ ಶಕ್ತಿಯನ್ನು ವೃದ್ಧಿಸಿಕೊಂಡು ಜಾಗತಿಕ ಕ್ಷಿತಿಜದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.