HomeLife Styleಬ್ರೆಡ್ ಯಾವ ಟೈಮಲ್ಲಿ ತಿಂದ್ರೆ ಒಳ್ಳೆಯದು? ಇದನ್ನು ನೀವು ತಿಳಿಯಲೇಬೇಕು!

ಬ್ರೆಡ್ ಯಾವ ಟೈಮಲ್ಲಿ ತಿಂದ್ರೆ ಒಳ್ಳೆಯದು? ಇದನ್ನು ನೀವು ತಿಳಿಯಲೇಬೇಕು!

For Dai;y Updates Join Our whatsapp Group

Spread the love

ಇಂದಿನ ಯುಗದಲ್ಲಿ, ಕೋಟ್ಯಾಂತರ ಜನರು ಉಪಾಹಾರಕ್ಕಾಗಿ ಬ್ರೆಡ್ ಸೇವಿಸುತ್ತಾರೆ.

ಜನರು ಉತ್ತಮ ರುಚಿಯೊಂದಿಗೆ ತಿನ್ನುವ ಬ್ರೆಡ್‌ನಿಂದ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಬ್ರೆಡ್ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಅದಕ್ಕಾಗಿಯೇ ಎಲ್ಲಾ ವಯಸ್ಸಿನ ಜನರು ಉಪಾಹಾರದಿಂದ ವಿವಿಧ ಭಕ್ಷ್ಯಗಳಲ್ಲಿ ಬ್ರೆಡ್ ಸೇವಿಸುತ್ತಾರೆ. ಆದರೆ ಅದರ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದೋ ಎಂಬುದನ್ನು ನಿರ್ಧರಿಸಲು ಅದರ ಪ್ರಕಾರವನ್ನು, ಉತ್ಪಾದನಾ ವಿಧಾನವನ್ನು, ಮತ್ತು ವ್ಯಕ್ತಿಯ ಇತರ ಆಹಾರ ಅಭ್ಯಾಸಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಕೆಲವು ಅಂಶಗಳನ್ನು ಗಮನಿಸಬಹುದು ಇದು ಕೆಲವು ಸಂದರ್ಭದಲ್ಲಿ ಒಳ್ಳೆಯದು ಕೆಲವು ಸಂದರ್ಭದಲ್ಲಿ ಕೆಟ್ಟದ್ದು.

ಹಲವಾರು ಪ್ರಕಾರದ ಬ್ರೆಡ್‌ಗಳಲ್ಲಿ ಪೌಷ್ಟಿಕಾಂಶಗಳು ಅರ್ಥಾತ್ ವಿಟಮಿನ್ B, ಹೈಸುಡಸು, ನಾರು, ಮತ್ತು ಖನಿಜಗಳು ಇರುತ್ತವೆ. ವಿಶೇಷವಾಗಿ ಇದು ಒಳ್ಳೆಯ ಮೂಲ ಆಹಾರವಾಗಿದೆ, ಇದು ಹಸಿವು ತಣಿಸಲು ಮತ್ತು ಶಕ್ತಿಯನ್ನು ಒದಗಿಸಲು ಸಹಾಯಕವಾಗುತ್ತದೆ. ಅನಾರೋಗ್ಯದ ಸಂದರ್ಭದಲ್ಲಿ ಇದು ಸಹಾಯಕವಾಗಿದೆ. ಬಹುತೇಕ ಶುದ್ಧೀಕರಿಸಿದ ಹಿಟ್ಟಿನಿಂದ ತಯಾರಿಸಿದ ಬ್ರೆಡ್‌ಗಳಲ್ಲಿ ಕೇವಲ ಕಾರ್ಬೋಹೈಡ್ರೇಟ್‌ಗಳು ಇರುತ್ತವೆ ಮತ್ತು ಇತರ ಪೌಷ್ಠಿಕಾಂಶಗಳನ್ನು ಕಳೆದುಕೊಳ್ಳುತ್ತವೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಕ್ಷಣ ಹೆಚ್ಚಿಸುತ್ತದೆ. ಕೆಲವೊಂದು ಬ್ರೆಡ್‌ಗಳಲ್ಲಿ ಸಂರಕ್ಷಣಾಕಾರಕಗಳು, ಕೃತಕ ರಸಾಯನಿಕಗಳು, ಮತ್ತು ಹೆಚ್ಚು ಶಕ್ಕರೆ ಅಥವಾ ಉಪ್ಪು ಇರುತ್ತವೆ, ಇದು ಆರೋಗ್ಯಕ್ಕೆ ಒಳ್ಳೆಯದಾಗುವುದಿಲ್ಲ.

ಇದು ಹೆಚ್ಚು ನಾರು, ವಿಟಮಿನ್‌ಗಳು, ಮತ್ತು ಖನಿಜಗಳನ್ನು ಒದಗಿಸುತ್ತದೆ. ಇತರ ಪೌಷ್ಟಿಕ ಆಹಾರಗಳೊಂದಿಗೆ ಸಮತೋಲನವಾಗಿರುವುದು ಮುಖ್ಯ. ಹೆಚ್ಚಿನ ಸಕ್ಕರೆ, ಉಪ್ಪು, ಮತ್ತು ಕೃತಕ ಸಂರಕ್ಷಣಾಕಾರಕಗಳು ಕಡಿಮೆ ಇರುವ ಬ್ರೆಡ್‌ಗಳನ್ನು ಆಯ್ಕೆಮಾಡಿ. ನೀವು ಬ್ರೆಡ್​ ತಿನ್ನಲು ಬಯಸಿದರೆ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಬ್ರೆಡ್ ಆರೋಗ್ಯಕರವಾಗಿರಬಹುದು ಅಥವಾ ಇಲ್ಲವಾಗಿರಬಹುದು, ಅದು ಬ್ರೆಡ್‌ರ ಪ್ರಕಾರ, ಅದರ ತಯಾರಿಕಾ ವಿಧಾನ, ಮತ್ತು ನೀವು ಅದನ್ನು ಹೇಗೆ ಉಪಯೋಗಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಯಾವಾಗ ತಿನ್ನಬಹುದು ಎಂಬುದಕ್ಕೆ ಉತ್ತರ – ಬ್ರೆಡ್ ನಲ್ಲಿ ತಯಾರಿಸಿದ ಸ್ಯಾಂಡ್ವಿಚ್ ಮಧ್ಯಾಹ್ನದ ತಿಂಡಿಗೆ ಒಳ್ಳೆಯ ಆಯ್ಕೆಯಾಗಿದೆ. ಬ್ರೆಡ್​​ನಲ್ಲಿಯೂ ಹಲವಾರು ತರದ ಬ್ರೆಡ್​ಗಳನ್ನು ತಯಾರಿಸಲಾಗುತ್ತದೆ.

ಬ್ರೆಡ್ ಬೆಳಗಿನ ತಿಂಡಿಯಲ್ಲೇ ತಿನ್ನಲು ಸೂಕ್ತ. ಶುದ್ಧ ಹಿಟ್ಟಿನಿಂದ ತಯಾರಿಸಿದ ಬ್ರೆಡ್ ಅಥವಾ ಸಂಪೂರ್ಣ ಗೋಧಿ ಹಿಟ್ಟಿನ ಬ್ರೆಡ್, ತಾಜಾ ಹಣ್ಣು, ಪಲ್ಯ, ಮತ್ತು ಪ್ರೋಟೀನ್‌ ಹೊಂದಿದ ಆಹಾರಗಳೊಂದಿಗೆ ಸೇವಿಸಬಹುದು. ಉದಾಹರಣೆ: ಪೀನಟ್ ಬಟರ್, ಎಗ್, ಅಥವಾ ಅವಕಾಡೊ ಟೋಸ್ಟ್. ನಿಮಗೆ ಶುಗರ್​ ಇದೆ ಎಂದಾದರೆ ನೀವು ಸಪ್ಪೆ ಬ್ರೆಡ್​ ತಿನ್ನುವುದು ಉತ್ತಮ. ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಇದು ಮಾರಕ. ಹಗಲು ಹೊತ್ತಿನಲ್ಲಿ ಲಘು ತಿಂಡಿಗಾಗಿ ಬ್ರೆಡ್ ಉಪಯೋಗಿಸಬಹುದು. ಇದರೊಂದಿಗೆ ಪೂರಕವಾಗಿ ಹಣ್ಣುಗಳು, ಸಬ್ಜಿಗಳು, ಅಥವಾ ಹಾಲು ಉತ್ಪನ್ನಗಳನ್ನು ಸೇರಿಸಬಹುದು. ಮಧ್ಯಾಹ್ನ ಅಥವಾ ಸಂಜೆ ವೇಳೆಯಲ್ಲಿ ಹಸಿವು ತಣಿಸಲು ಬ್ರೆಡ್ ಮತ್ತು ಪಲ್ಯಗಳನ್ನು ಅಥವಾ ಸಿಹಿ ರುಚಿಯ ತಯಾರಿಸಿದ ಬ್ರೆಡ್‌ ಉಪಯೋಗಿಸಬಹುದು. ಸ್ವೀಟ್​ ಬ್ರೆಡ್​ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಡಿಮೆ ಪ್ರಮಾಣದಲ್ಲಿ ಬ್ರೆಡ್ ತಿನ್ನುವುದು ಉತ್ತಮ, ವಿಶೇಷವಾಗಿ ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಿದ ಬ್ರೆಡ್ ಅಥವಾ ಕಡಿಮೆ ಕಾರ್ಬೋಹೈಡ್ರೇಟ್ ಬ್ರೆಡ್ ಆಯ್ಕೆಮಾಡಬಹುದು. ತಾಜಾ ಸಬ್ಜಿಗಳು ಮತ್ತು ಪ್ರೋಟೀನ್‌ ಸಹಿತ ಸ್ಯಾಂಡ್ವಿಚ್ ಅಥವಾ ಟೋಸ್ಟ್ ಮಾಡಿ ತಿನ್ನಬಹುದು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!