ವರ್ಷದ ಎಲ್ಲಾ ಸಮಯದಲ್ಲೂ ಬೇರೆ ಬಗೆಯ ಹಣ್ಣುಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಬೆಲೆಗೆ ಸಿಗುವ ಮತ್ತು ಪ್ರತಿಯೊಬ್ಬರು ಇಷ್ಟಪಟ್ಟು ತಿನ್ನುವ ಹಣ್ಣು ಎಂದರೆ ಅದು ಬಾಳೆಹಣ್ಣು. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಹಾಗೂ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ಇರುವ ತೊಂದರೆಗಳಿಗೆ ಬಾಳೆಹಣ್ಣು ಹೆಚ್ಚು ಪ್ರಯೋಜನಕಾರಿ. ಈ ಬಾಳೆಹಣ್ಣುಗಳು ಕಡಿಮೆ ಬೆಲೆಯದ್ದಾಗಿರುವುದರಿಂದ ವಾರಕ್ಕೆ ಬೇಕಾದಷ್ಟು ತೆಗೆದುಕೊಂಡು ತಿನ್ನುತ್ತಾರೆ. ಇನ್ನೂ ಬಾಳೆಹಣ್ಣು ತಿನ್ನಲು ಸರಿಯಾದ ಸಮಯವಿದೆಯೇ? ಈ ಎಲ್ಲ ಮಾಹಿತಿ ಇಲ್ಲಿದೆ.
ಕೆಮ್ಮಿನ ಸಮಸ್ಯೆ ಇರುವವರು ರಾತ್ರಿಯಲ್ಲಿ ಬಾಳೆಹಣ್ಣನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಆದರೆ ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಯಾವತ್ತೂ ತಿನ್ನಬೇಡಿ. ಬಾಳೆಹಣ್ಣುಗಳಲ್ಲಿ ಆಮ್ಲೀಯ ಸ್ವಭಾವವನ್ನು ಹೊಂದಿರುವುದ್ದರಿಂದ ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಇಂದೂ ನೀವು ಖರೀದಿಸುವ ಪ್ರತಿಯೊಂದು ಹಣ್ಣು ತರಕಾರಿಗಳನ್ನು ರಾಸಯನಿಕ ಔಷಧಿಗಳನ್ನು ಸಿಂಪಡಿಸಿ ಬೆಳೆಸಲಾಗುತ್ತದೆ. ಆದ್ದರಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದ್ದರಿಂದ ನಿಮ್ಮ ಆಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ಸೇವಿಸುವುದ್ದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.ರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚಿದೆ.
ಆದ್ದರಿಂದ ನೀವು ಬಾಳೆಹಣ್ಣುಗಳನ್ನು ಸೇವಿಸುವ ಉತ್ತಮ ಕ್ರಮವೆಂದರೆ ನೀವು ಸೇವಿಸುವ ಆಹಾರಗಳ ಜೊತೆಗೆ ಸೇವಿಸಿ. ಬಾಳೆಹಣ್ಣಿನಿಂದ ತಯಾರಿಸಲಾಗುವ ಕೆಲವೊಂದಿಷ್ಟು ರೆಸಿಪಿಗಳನ್ನು ತಯಾರಿಸಿ ತಿನ್ನುವುದು ಉತ್ತಮವಾಗಿದೆ.