LPG ಗ್ಯಾಸ್ ಸಿಲಿಂಡರ್ ಸಾಮಾನ್ಯವಾಗಿ ಸುರಕ್ಷಿತ, ಪರಿಣಾಮಕಾರಿ ಮತ್ತು ಅನುಕೂಲಕರವಾಗಿದ್ದರೂ, ಗ್ಯಾಸ್ ಸೋರಿಕೆಯಾಗುತ್ತದೆ. ಗಮನಿಸದಿದ್ದರೆ, ಗ್ಯಾಸ್ ಸೋರಿಕೆ ಜೀವಕ್ಕೆ ಅಪಾಯಕಾರಿ ಸ್ಫೋಟಕ್ಕೆ ಕಾರಣವಾಗಬಹುದು.
ಮನೆಯಲ್ಲಿ ಗ್ಯಾಸ್ ಸೋರಿಕೆ ಬಗ್ಗೆ ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವುದು ಬೇಡ. ಅಪ್ಪಿ ತಪ್ಪಿ ಸೋರಿಕೆ ಆಗುತ್ತಿದ್ದರೆ, ಅದಕ್ಕಾಗಿ ನೀವು ಈ ಕೆಳಗಿನ ಟಿಪ್ಸ್ ಅನುಸರಿಸಿ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಿ.
ನಮಗೆ ಪ್ರತಿದಿನ ಅಡುಗೆ ಮಾಡಲು ಸಹಾಯ ಮಾಡುವ ಗ್ಯಾಸ್ ಬಗ್ಗೆ ನಾವು ಕಾಳಜಿಯನ್ನು ವಹಿಸುವುದು ಅನಿವಾರ್ಯವಾಗಿದೆ. ಈಗಂತೂ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಾಡಿನ ಜನರು ಕೂಡ ಮನೆ ಮನೆಗೆ ಗ್ಯಾಸ್ ಕನೆಕ್ಷನ್ ಹೊಂದಿದ್ದಾರೆ.
ವಿಶೇಷವಾಗಿ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಮನೆಯಲ್ಲಿ ಗ್ಯಾಸ್ ಇರುವುದು ಅವರೆಲ್ಲರಿಗೂ ಸಾಕಷ್ಟು ಅನುಕೂಲ ಅನಿಸುತ್ತದೆ. ನಗರ ಪ್ರದೇಶಗಳಲ್ಲಿ ಸಹ ಅಷ್ಟೇ. ಆದರೆ ಕೆಲವೊಮ್ಮೆ ಗ್ಯಾಸ್ ಸಿಲಿಂಡರ್ ಕೆಲವು ಕಾರಣಗಳಿಗೆ ಲೀಕೇಜ್ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರ ಸುರಕ್ಷತೆ ನಮಗೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಬಹು ದೊಡ್ಡ ಅಗ್ನಿದುರಂತ ಸಂಭವಿಸುತ್ತದೆ.
ಮನೆಯಲ್ಲಿರುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಾಧಾರಣವಾಗಿ ಸುರಕ್ಷತೆಯಿಂದಲೇ ಕೂಡಿರುತ್ತದೆ. ಆದರೂ ಕೂಡ ಕೆಲವೊಮ್ಮೆ ಸಿಲಿಂಡರ್ ಮೇಲ್ಭಾಗದ ಪಿನ್ ಹಾನಿಯಾಗಿದ್ದರೆ ಅದರಿಂದ ಹೊತ್ತಿ ಉರಿಯಬಲ್ಲ ಗ್ಯಾಸ್ ಹೊರಬರುತ್ತದೆ.
ಇದು ಅಪ್ಪಿತಪ್ಪಿ ಬೆಂಕಿ ಹೊತ್ತಿಕೊಂಡರೆ ಮೈಕೈ ಸುಟ್ಟು ಹೋಗುವಂತೆ ಮಾಡುವುದರ ಜೊತೆಗೆ ಸಾವು ನೋವುಗಳು ಸಂಭವಿಸುವಂತೆ ಆಗುತ್ತದೆ. ಆದರೆ ಇದಕ್ಕೆ ಮುಂಚೆ ಎಚ್ಚೆತ್ತುಕೊಂಡು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಇದರಿಂದ ಸುಲಭವಾಗಿ ಪಾರಾಗಬಹುದು.
ಸಿಲಿಂಡರ್ ನಲ್ಲಿರುವ ಗ್ಯಾಸ್ ಸಾಕಷ್ಟು ಹಾನಿಕಾರಕ. ಅದು ಸೋರಿಕೆ ಆದಂತಹ ಸಂದರ್ಭದಲ್ಲಿ ಅದನ್ನು ನೀವು ಸೇವನೆ ಮಾಡಿದರೆ ಅದರಿಂದ ನಿಮಗೆ ಉಸಿರಾಟದ ತೊಂದರೆ ಎದುರಾಗಬಹುದು, ಮಾತನಾಡಲು ಮತ್ತು ನಡೆಯಲು ಕಷ್ಟವಾಗಬಹುದು. ಏಕೆಂದರೆ ಇದು ನೇರವಾಗಿ ನಿಮ್ಮ ಮೇಲಿನ ಭಾಗದ ನರಮಂಡಲವನ್ನು ಹಾನಿಮಾಡುತ್ತದೆ.
ಜೊತೆಗೆ ನಿಮ್ಮ ಹೃದಯದ ಕಾರ್ಯ ಚಟುವಟಿಕೆ ಕೂಡ ವಿಪರೀತವಾಗಿ ಬದಲಾಗಿಬಿಡುತ್ತದೆ. ನಿಮ್ಮ ರಕ್ತದ ಒತ್ತಡ ಏರಿಕೆ ಕಾಣಬಹುದು. ಹೀಗಾಗಿ ನಿಮ್ಮ ಮನೆಯ ಎಲ್ಪಿಜಿ ಸಿಲಿಂಡರ್ ಸೋರಿಕೆ ಆಗುತ್ತಿದೆ ಅಥವಾ ಇಲ್ಲ ಎಂಬುದನ್ನು ನೀವು ಆಗಾಗ ಪರೀಕ್ಷೆ ಮಾಡುವುದು ಬಹಳ ಉತ್ತಮ.
ಸಾಕಷ್ಟು ಕಡೆ ಗ್ಯಾಸ್ ಸಿಲಿಂಡರ್ ಸೋರಿಕೆ ಆದಂತಹ ಸಂದರ್ಭದಲ್ಲಿ ಅದು ಸಿಡಿಯುವ ಅಥವಾ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಒಳಗಡೆ ಇರುವುದು ನಿಮಗೆಲ್ಲ ಗೊತ್ತಿರುವ ಹಾಗೆ ಹೊತ್ತಿ ಉರಿಯಬಲ್ಲ ಗ್ಯಾಸ್. ಹೀಗಾಗಿ ಇದು ಏಕಾಏಕಿ ಬ್ಲಾಸ್ಟ್ ಸಹ ಆಗಬಹುದು ಮತ್ತು ಸುತ್ತಮುತ್ತಲು ಇರುವಂತಹ ಯಾವುದೇ ವಸ್ತುಗಳನ್ನು ಅಥವಾ ಜನರನ್ನು ಸಂಪೂರ್ಣವಾಗಿ ಸುಟ್ಟು ಹಾಕಬಹುದು.
ಗ್ಯಾಸ್ ಸಿಲಿಂಡರ್ ಸೋರಿಕೆ ಆದಂತಹ ಸಂದರ್ಭದಲ್ಲಿ ನೀವೇನು ಮಾಡಬೇಕು?
ಸಾಧ್ಯವಾದಷ್ಟು ಈ ಕೆಳಗಿನ ರೀತಿ ನೀವು ಸಹ ಆಲೋಚನೆ ಮಾಡಿ ಗ್ಯಾಸ್ ಸೋರಿಕೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದು. ಏನು ಎಂದರೆ, ಹುತ್ತಿ ಉರಿಯುತ್ತಿರುವಂತೆ ಕಾಣುವ ಯಾವುದೇ ವಸ್ತುವನ್ನು ಮೊದಲು ನೀರು ಹಾಕಿ ನಂದಿಸುವುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಎಲ್ಪಿಜಿ ಗ್ಯಾಸ್ ನಿಂದ ಬೆಂಕಿ ಹೊರಬರುತ್ತಿದ್ದರೆ, ಮೊದಲು ಗ್ಯಾಸ್ ಸ್ಟವ್ ಆಫ್ ಮಾಡಿ.
ಈಗ ಆದಷ್ಟು ಬೇಗನೆ ಗ್ಯಾಸ್ ಸಿಲಿಂಡರ್ ರೆಗುಲೇಟರ್ ಅನ್ನು ಆಫ್ ಮಾಡಿ. ಸಿಲಿಂಡರ್ ಭಾಗದಲ್ಲಿ ಸೇಫ್ಟಿ ಕ್ಯಾಪ್ ಕ್ಲೋಸ್ ಮಾಡಿ. ಈ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ಲೈಟ್ ಫ್ಯಾನ್ ಸ್ವಿಚ್ ಆನ್ ಮಾಡುವುದು ಅಥವಾ ಆಫ್ ಮಾಡುವುದು ಮಾಡಬೇಡಿ. ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಈ ಸಮಯದಲ್ಲಿ ಬಳಸಬೇಡಿ. ಏಕೆಂದರೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಜಾಸ್ತಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.
ಬೆಂಕಿಕಡ್ಡಿ ಗೀರುವುದು, ಸಿಗರೇಟ್ ಲೈಟರ್ ಹಚ್ಚುವುದು, ಸಿಗರೇಟ್ ಸೇದುವುದು ಇವೆಲ್ಲ ಮಾಡಲೇಬೇಡಿ. ಇದರಿಂದ ನೀವಾಗಿಯೇ ಅಪಾಯವನ್ನು ತಂದುಕೊಂಡಂತೆ ಆಗುತ್ತದೆ. ನಿಮ್ಮ ಮನೆಯ ಎಲ್ಲಾ ಕಿಟಕಿ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ತೆರೆದು ಬಿಡಿ. ಇದರಿಂದ ಮನೆಯೊಳಗೆ ಗಾಳಿ ಹೆಚ್ಚು ಓಡಾಡಿ ಸೋರಿಕೆ ಆಗುತ್ತಿರುವ ಗ್ಯಾಸ್ ಹೊರಹೋಗಲು ಮತ್ತು ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದ ಬ್ಲಾಸ್ಟ್ ಆಗುವ ಅಪಾಯ ತೀರಾ ಕಡಿಮೆಯಾಗುತ್ತದೆ.