ನಿಮ್ಮ ಸರ್ಕಾರ ಬಂದಾಗ ಏಕೆ ಇವರೆಲ್ಲ ಬಾಲ ಬಿಚ್ಚುತ್ತಾರೆ?: ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

0
Spread the love

ಚಿಕ್ಕಮಗಳೂರು: ಮತಾಂದರಿಗೆ ಬೆಂಬಲ ಕೊಟ್ಟು ರಾಜಕಾರಣ ಮಾಡುವುದರಿಂದ ಮತಾಂದರು ಕೊಬ್ಬಿದ್ದಾರೆ ಎಂದು ಎಂಎಲ್‍ಸಿ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂದರಿಗೆ ಬೆಂಬಲ ಕೊಟ್ಟು ರಾಜಕಾರಣ ಮಾಡುವುದರಿಂದ ಮತಾಂದರು ಕೊಬ್ಬಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಸೆಕ್ಯುಲರ್ ಅಂದ್ರೆ ಇದೇನಾ? ಗಣೇಶೋತ್ಸವದ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಹಾಕಿಸೋದು ನಿಮ್ಮ ಸೆಕ್ಯುಲರ್ ನೀತಿನಾ? ನಿಮ್ಮ ಸರ್ಕಾರ ಬಂದಾಗ ಏಕೆ ಇವರೆಲ್ಲ ಬಾಲ ಬಿಚ್ಚುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

Advertisement

ಜಮೀರ್ ಅಹ್ಮದ್, ಪ್ಯಾಲೆಸ್ತೀನ್ ಧ್ವಜ ಹಾರಿಸಿದರೆ ತಪ್ಪೇನು ಎಂದು ಕೇಳಿದ್ದಾರೆ. ಜಮೀರ್ ಸಾಹೇಬ್ರೆ, ಇಲ್ಲಿರುವವರಿಗೂ ಪ್ಯಾಲೆಸ್ತೀನ್‍ಗೂ ಏನು ಸಂಬಂಧ? ಏಕೆ ಹಾರಿಸಬೇಕು? ನಿಮಗೆ ಭಾರತದ ಧ್ವಜ ಹಾರಿಸಬೇಕಾದ್ರೆ ಕಷ್ಟವಾಗುತ್ತದೆ. ಒಂದೇ ಮಾತರಂ ಹೇಳಲು ಷರಿಯಾ ಅಡ್ಡಿಯಾಗುತ್ತೆ. ಅವರಿಗೆ ಬೆಂಬಲಿಸಿ ಮಾತನಾಡುವುದ ನೋಡಿದಾಗ ನಿಮ್ಮ ಬಗ್ಗೆಯೂ ಅನುಮಾನ ಬರುತ್ತದೆ. ಸರ್ಕಾರ ಹಾಗೂ ನಿಮ್ಮ ನಡವಳಿಕೆ ಜಿನ್ನಾಗಿಂತ ಕಡಿಮೆ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here