ಮೈಸೂರು: ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಮುಡಾದಲ್ಲಿ ಹೆಚ್ಚಿನ ಭ್ರಷ್ಟಾಚಾರಗಳಾಗಿವೆ ಎಂದು ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು. ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಮುಡಾದಲ್ಲಿ ಹೆಚ್ಚಿನ ಭ್ರಷ್ಟಾಚಾರಗಳಾಗಿವೆ. ಇದರ ಜೊತೆಗೆ ವಾಲ್ಮೀಕಿ ನಿಗಮದಲ್ಲಿ ಸಿಎಂ ಗಮನಕ್ಕೆ ಬಾರದೇ ಹಣ ವರ್ಗಾವಣೆ ಹೇಗಾಯಿತು?. ಹಣಕಾಸು ಇಲಾಖೆ ಸಿಎಂಗೆ ಸೇರಿದ ವಿಚಾರ. ಮುಖ್ಯಮಂತ್ರಿಗಳು ಸಮಾಜವಾದಿ ಹಿನ್ನೆಲೆಯಿಂದ ಬಂದವರು.
ಹೀಗಾಗಿ ರಾಜೀನಾಣೆ ನೀಡಲಿ. ಕಳಂಕದಿಂದ ಹೊರಬಂದ ನಂತರ ಮತ್ತೆ ಸಿಎಂ ಆಗಲಿ ಎಂದು ಹೇಳಿದರು. ಇನ್ನೂ ಮುಡಾ ಮೀಟಿಂಗ್ಗೆ ಬರುವ ಪ್ರತಿ ಫೈಲ್ಗಳನ್ನೂ ನಾವೆಲ್ಲಾ ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ ನಂತರ ಎಲ್ಲಾ ಫೈಲ್ಗಳನ್ನು ಸಭೆಗೆ ತಂದಿಡುವುದು ಸಾಮಾನ್ಯ. ಆಗ ನಾವು ಸರಿಯೆಂದು ಒಪ್ಪಿಗೆ ಕೊಡುತ್ತೇವೆ. ಮುಡಾದಲ್ಲಿ ಅಧಿಕಾರಿಗಳ ಆಟ ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ಎಲ್ಲವೂ ನಡೆಯುತ್ತಿದೆ ಎಂದು ದೂರಿದರು.