ಚಿಕ್ಕಮಗಳೂರು:- ಜಿಎಸ್‍ಟಿ ಜಾಸ್ತಿ ಮಾಡಿದಾಗಲೂ ಅವರದ್ದೇ ಶಬ್ಬಾಷ್‍ಗಿರಿ, ಕಡಿಮೆ ಮಾಡಿದ್ರೂ ಅವರದ್ದೇ ಶಬ್ಬಾಸ್‍ಗಿರಿ. ಈ ದೇಶವನ್ನು ನಾವೀಗ ಒಂದು ಕಾಮಿಡಿಗೆ ಇಟ್ಟುಕೊಂಡಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್‍ಟಿ ಇಳಿಸಿದ ವಿಚಾರವಾಗಿ ಮಾತನಾಡಿದ ಅವರು, ಜಿಎಸ್‍ಟಿ ಏರಿಸಿದ್ದೇ ಅವರು ಆಗಲೂ ಬಿಜೆಪಿಗರು ಸಂಭ್ರಮಾಚರಣೆ ಮಾಡಿದ್ದರು. ಈಗ ಇಳಿಸಿದ್ದೂ ಅವರೇ ಈಗಲೂ ಸಂಭ್ರಮಾಚರಣೆ ಮಾಡ್ತಿದ್ದಾರೆ. ಜಿಎಸ್‍ಟಿ ಜಾಸ್ತಿ ಮಾಡಿದಾಗಲೂ ಅವರದ್ದೇ ಶಬ್ಬಾಷ್‍ಗಿರಿ, ಕಡಿಮೆ ಮಾಡಿದ್ರೂ ಅವರದ್ದೇ ಶಬ್ಬಾಸ್‍ಗಿರಿ. ಈ ದೇಶವನ್ನು ನಾವೀಗ ಒಂದು ಕಾಮಿಡಿಗೆ ಇಟ್ಟುಕೊಂಡಿದ್ದೇವೆ.
ಜಿಎಸ್‍ಟಿ ಕಡಿಮೆಯಾಗಿದ್ರೂ ಇನ್ಪುಟ್ ಸಬ್ಸಿಡಿಯಲ್ಲಿ ಬಹಳಷ್ಟು ಗೊಂದಲಗಳಿವೆ. 18% ಗಿಂತ ಜಾಸ್ತಿ ಬೇಡ ಎಂದು ರಾಹುಲ್ ಗಾಂಧಿಯವರು ಹೇಳಿದಾಗ ಎಲ್ಲರೂ ನಕ್ಕರೂ, ಈಗ ಅದನ್ನೇ ಮಾಡಿದ್ದಾರೆ. ಜನರೇಷನ್ ನೆಕ್ಸ್ಟ್ ಟ್ಯಾಕ್ಸ್ ಅಂತ ಪ್ರಪಂಚದಲ್ಲಿ ಎಲ್ಲಾದರೂ ಇರುತ್ತಾ? ಇವೆಲ್ಲಾ ಏನ್ ಟೈಟಲ್‍ಗಳು ಎಂದು ವ್ಯಂಗ್ಯವಾಡಿದ್ದಾರೆ.



