ಬೆಂಗಳೂರು:- ನನಗೆ ಧಮ್ಕಿ ಹಾಕೋ ಧೈರ್ಯ ಯಾವನ್ರಿಗಿದೆ. ನನ್ನ ಹಿಂದೆ ದಲಿತ ಸಮುದಾಯವಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
Advertisement
ಮಾಜಿ ಸಂಸದ ಡಿಕೆ ಸುರೇಶ್ ಅವರ ಮಹದೇವಪ್ಪ ಅವರಿಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ತರ ಮಾತನ್ನ ನೀವ್ಯಾಕೆ ಕೇಳ್ತೀರಾ ನನಗೆ ಯಾರಾದರೂ ಬೆದರಿಕೆ ಹಾಕೋಗಾಗುತ್ತಾ..?
ಡಿಕೆ ಸುರೇಶ್ ನನ್ನ ಸ್ನೇಹಿತ ಅವರು ನನಗೆ ಪೋನ್ ಮಾಡಿಯೇ ಇಲ್ಲ, ಯಾಕೆ ಈ ರೀತಿಯ ಸುದ್ದಿ ಹರಡಲಾಗ್ತಿದೆ..? ಇಲ್ಲವೇ ಇಲ್ಲ ಎಂದ ಮೇಲೆ ಎಲ್ಲಿಂದ ಹೈಕಮಾಂಡ್ ಗಮನಕ್ಕೆ ತರೋದು ? ಈ ಘಟನೆ ಆಗಿಯೇ ಇಲ್ಲವಲ್ಲ, ಯಾಕೆ ಇದರ ಬಗ್ಗೆ ಮಾತಾಡಬೇಕು ಎಂದರು.