ಪಾಕ್ ವಿರುದ್ಧದ ಗೆಲುವಿಗೆ ಕಾರಣ ಯಾರು? ಕೊಹ್ಲಿ ಬಿಟ್ಟು ಕ್ಯಾಪ್ಟನ್ ರೋಹಿತ್ ಹೇಳಿದ ಆಟಗಾರರು ಇವರೇ!

0
Spread the love

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಾಕಿಸ್ತಾನ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ.

Advertisement

ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕ್ಯಾಪ್ಟನ್ ರೋಹಿತ್.. ಪಂದ್ಯದ ಆರಂಭದಲ್ಲೇ ನಮ್ಮ ಬೌಲಿಂಗ್ ವಿಭಾಗ ಒಳ್ಳೆಯ ಕೆಲಸ ಮಾಡಿತು. ಎದುರಾಳಿ ತಂಡದ ಸ್ಕೋರ್​​ ಕಟ್ಟಿಹಾಕುವಲ್ಲಿ ಬೌಲರ್ಸ್​ ಯಶಸ್ವಿಯಾದರು. ಲೈಟಿಂಗ್ಸ್​ನಲ್ಲಿ ಬ್ಯಾಟ್ ಮಾಡೋದು ಚೆನ್ನಾಗಿರುತ್ತದೆ, ಆದರೆ ರನ್ ಗಳಿಕೆಯು ನಿಧನವಾಗಿರುತ್ತದೆ ಅಂತಾ ತಿಳಿದಿತ್ತು. ಅನುಭವದ ಆಧಾರದ ಮೇಲೆ ಬ್ಯಾಟಿಂಗ್ ಲೈನ್​ಅಪ್ ಆಗಿತ್ತು.

ಅಕ್ಸರ್, ಕುಲ್ದೀಪ್​​ ಮತ್ತು ಜಡೇಜಾಗೆ ಕ್ರೆಡಿಟ್ ಸಲ್ಲಬೇಕು. ಅವರು ತಮ್ಮ ಕೆಲಸವನ್ನು ಅದ್ಭುತವಾಗಿ ನಿಭಾಯಿಸಿದರು. ರಿಜ್ವಾನ್ ಮತ್ತು ಶಕೀಲ್ ಉತ್ತಮ ಪಾರ್ಟ್ನರ್​​ಶಿಪ್​ನಲ್ಲಿ ಆಡುತ್ತಿದ್ದರು. ಈ ಪಾರ್ಟ್ನರ್​ಶಿಪ್​​ಗೆ ಆದಷ್ಟು ಬೇಗ ಬ್ರೇಕ್ ಹಾಕೋದು ಗುರಿಯಾಗಿತ್ತು. ಅದರಲ್ಲಿ ಯಶಸ್ವಿಯಾದೇವು.

ಸ್ಪಿನ್ನರ್​​ಗಳು ತಮ್ಮ ಅನುಭವ ಪ್ರದರ್ಶಿಸಿದರು. ಇಲ್ಲಿ ನಾವು ಪಾಂಡ್ಯ ಅವರನ್ನೂ ಮರೆಯುವಂತಿಲ್ಲ. ಹರ್ಷಿತ್ ಮತ್ತು ಶಮಿ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದರು. ನಮ್ಮಲ್ಲಿ ಆರು ಬೌಲರ್​ಗಳಿದ್ದಾರೆ. ಎಲ್ಲರಿಗೂ 10 ಓವರ್​ ನೀಡೋದು ಸ್ವಲ್ಪ ಕಷ್ಟ. ನಿನ್ನೆಯ ಪಂದ್ಯದಲ್ಲಿ ಅಕ್ಸರ್ ಮತ್ತು ಕುಲ್ದೀಪ್ ಅದ್ಭುತ. ಜಡೇಜಾ ಅವರು ಹಿಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದರು ಎಂದರು.

ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ, ವಿರಾಟ್ ಕೊಹ್ಲಿ ಯಾವುತ್ತೂ ದೇಶಕ್ಕಾಗಿ ಆಡೋದನ್ನು ಇಷ್ಟಪಡುತ್ತಾರೆ. ದೇಶಕ್ಕಾಗಿ, ತಂಡಕ್ಕಾಗಿ ಕೊಹ್ಲಿ ಆಟವು ಡ್ರೆಸ್ಸಿಂಗ್ ರೂಮ್​ನಲ್ಲಿ ಕೂತು ನೋಡುವ ನಮಗೆ ಸರ್ಪ್ರೈಸಿಂಗ್ ಆಗಿರುವುದಿಲ್ಲ. ಅದೆಷ್ಟೋ ಬಾರಿ ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಗೆಲುವಿಗೆ ಕಾರಣರಾದರು. ನಾನು ಕೂಡ ಬೌಂಡರಿಗಳನ್ನು ಬಾರಿಸುವಲ್ಲಿ ಯಶಸ್ವಿಯಾದೆ ಎಂದರು.


Spread the love

LEAVE A REPLY

Please enter your comment!
Please enter your name here