ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ, ಮನಸ್ಸಿನ ತುಂಬಾ ಸಂತೋಷ ತುಂಬಿರುವವರೇ ಶ್ರೀಮಂತರು. ಅಲ್ಪ ತೃಪ್ತಿಯನ್ನು ಪಡುವವರೇ ಶ್ರೀಮಂತರು. ಹೆಚ್ಚು ವಿಚಾರ ಮಾಡದೇ ಅಗತ್ಯಕ್ಕೆ ವಿಚಾರ ಮಾಡುವವರೇ ಶ್ರೀಮಂತರು. ಊಟ ಮಾಡುವಾಗ ಊಟವನ್ನು ಆನಂದದಿಂದ, ಸಂತೃಪ್ತಿಯಿಂದ ಊಟ ಸವಿಯುವವರೇ ಶ್ರೀಮಂತರು. ಗುಡಿಸಲಲ್ಲಾದರೂ ಪರವಾಗಿಲ್ಲ ಚಿಕ್ಕ ಮನೆಯಾದರೂ ಪರವಾಗಿಲ್ಲ, ಮನತುಂಬಿ ನಗುವವರೇ ಶ್ರೀಮಂತರು. ಸಾದಾ ಸೀದಾ ಎಲ್ಲರ ಜೊತೆ ಹೊಂದಿಕೊಳ್ಳುವವರು ಶ್ರೀಮಂತರು. ಮಕ್ಕಳ ಜೊತೆಗೆ ಮನ ತುಂಬಿ ಬೆರೆತು ಖುಷಿಪಡುವವರು ಶ್ರೀಮಂತರು. ಭೇದ-ಭಾವವಿಲ್ಲದೆ ಎಲ್ಲರೂ ನಮ್ಮವರೆಂದು ಬೆರೆತು ನಕ್ಕು ನಲಿದಾಡುವವರೇ ಶ್ರೀಮಂತರು.
ಹೆಚ್ಚು ಆಸೆ ಪಡದೆ ಇರುವುದರಲ್ಲೇ ತೃಪ್ತಿ ಹೊಂದಿಕೊಳ್ಳುವವರು ಶ್ರೀಮಂತರು. ನಾನೇ ಎಲ್ಲರಿಗಿಂತ ಚಿಕ್ಕವ, ನಾನೇ ಅದೃಷ್ಟವಂತ ಎಂದುಕೊಳ್ಳುವವರೇ ದೊಡ್ಡ ಶ್ರೀಮಂತರು. ಮನತುಂಬ ನಗು, ಉತ್ತಮ ಆರೋಗ್ಯ, ಮಾಡುವ ಕೆಲಸದಲ್ಲಿ ತೃಪ್ತಿ, ಅದು ದಿನಕ್ಕೆ ಹತ್ತು ರೂಪಾಯಿ ದುಡಿದರೂ ಪರವಾಗಿಲ್ಲ. ಯಾರಿಗೆ ತಮ್ಮ ದುಡಿಮೆಯಲ್ಲಿ ತೃಪ್ತಿ ಇರುತ್ತದೆಯೋ ಅವರೇ ಅತಿ ದೊಡ್ಡ ಶ್ರೀಮಂತರು. ಇವರಿಗಿಂತ ಶ್ರೀಮಂತರು ಜಗಕೆ ಬೇಕೇ?
–ಮಂಜುಳಾ ಇಟಗಿ.
ಯೋಗ ಶಿಕ್ಷಕಿ, ಮುಂಡರಗಿ.