ಬಿಗ್ ಬಾಸ್ ಕೊನೆಯ ಹಂತ ತಲುಪತಲು ಸಜ್ಜಾಗುತ್ತಿದೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಟಿಕೆಟ್ ಟು ಫಿನಾಲೆ ಪೈಪೋಟಿ ಜೋರಾಗಿಯೇ ಇದೆ. ಸದ್ಯ ಟಿಕೆಟ್ ಟು ಫಿನಾಲೆ , ಹನುಮಂತನ ಪಾಲಾಗಿದೆ ಎನ್ನಲಾಗಿದೆ. ಈ ವಾರ ವೀಕ್ಷಕರು ಕಿಚ್ಚನ ಪಂಚಾಯ್ತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ಈ ವಾರ ವೇಗದ ಮಿತಿಮೀರಿ, ಆಟದ ಗತಿ ತಪ್ಪಿಸಿದೋರು ಯಾರು ಎಂದು ಕ್ಲಾಸ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.
ಈ ವಾರ ಸ್ಪರ್ಧಿಗಳಿಗೆ ತುಂಬಾ ಮುಖ್ಯವಾಗಿತ್ತು. ಅದರಲ್ಲೂ ಟಿಕೆಟ್ ಟು ಫಿನಾಲೆಗೆ ಎಂಟ್ರಿ ಕೊಡುವ ಸಲುವಾಗಿ ಸ್ಪರ್ಧಿಗಳು ನಾ ಮುಂದು, ತಾ ಮುಂದು ಅಂತ ಹೋರಾಟ ಮಾಡಿರೋ ವಾರವಾಗಿತ್ತು. ಆದರೆ ಕೇವಲ 2 ಸೆಕೆಂಡ್ಗಳಲ್ಲಿ ಟಿಕೆಟ್ ಟು ಫಿನಾಲೆ ಪಾಸ್ ಅನ್ನು ಹನುಮಂತ ಪಡೆದುಕೊಂಡಿದ್ದಾರೆ.
ಅಲ್ಲದೇ ಈ ವಾರ ಸ್ಪರ್ಧಿಗಳು ಎಲ್ಲಿ ಎಡವಿದರೂ, ಎಲ್ಲಿ ಧ್ವನಿ ಎತ್ತಬೇಕಾಗಿತ್ತು, ಉಸ್ತುವಾರಿ ಮಾಡಿರೋ ತಪ್ಪೇನು, ಭವ್ಯಾ ಗೌಡ ಹನುಮಂತ ಮೇಲೆ ಕೈ ಮಾಡಿದ್ದೇಕೆ ಎಂಬೆಲ್ಲಾ ವಿಚಾರಗಳ ಬಗ್ಗೆ ಇಂದಿನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ಇನ್ನೂ ಭವ್ಯಗೌಡ, ತ್ರಿವಿಕ್ರಮ್, ಧನರಾಜ್, ಮೋಕ್ಷಿತಾ, ಚೈತ್ರಾ ಕುಂದಾಪುರ ಅವರು ಮನೆಯಿಂದ ಹೋಗಲು ನಾಮಿನೇಟ್ ಆಗಿದ್ದಾರೆ. ಯಾರಿಗೆ ಗೇಟ್ಪಾಸ್ ಸಿಗಲಿದೆ ಅನ್ನೋದು ಕಿಚ್ಚನ ಪಂಚಾಯ್ತಿಯಲ್ಲಿ ಗೊತ್ತಾಗಲಿದೆ. ಅಲ್ಲದೇ ಇಂದಿನ ಕಿಚ್ಚನ ಎಪಿಸೋಡ್ನಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.