ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಝಗಮಗಿಸುವ ವೇದಿಕೆಯಲ್ಲಿ ಅದ್ದೂರಿ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್ ಅವರು ಎಂದಿನ ಉತ್ಸಾಹದಲ್ಲಿ ಫಿನಾಲೆ ಸಂಚಿಕೆ ನಡೆಸಿಕೊಡಲಿದ್ದಾರೆ. ಭವ್ಯಾ ಗೌಡ, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್, ಉಗ್ರಂ ಮಂಜು ಅವರ ಪೈಕಿ ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬುದನ್ನು ತಿಳಿಯಲು ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಈ ನಡುವೆ ಭವ್ಯ, ರಜತ್ ಹಾಗೂ ಉಗ್ರಂ ಮಂಜು ಕೂಡ ಪ್ರೇಕ್ಷಕರ ಬಳಿ ಮಾತನಾಡಿ, ಬಿಗ್‌ಬಾಸ್ ಜರ್ನಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ತಮ್ಮದೇ ಶೈಲಿಯಲ್ಲಿ ಮತ ಕೇಳಿದ್ದಾರೆ. ಭವ್ಯ ಅವರನ್ನು ನೋಡಿದ ಪ್ರೇಕ್ಷಕರು ಹೋ.. ಎಂದು ಕೂಗಿದ್ದಾರೆ. ಈ ವೇಳೆ ಮಾತನಾಡಿದ ಭವ್ಯ, ನಾನು ಆಡಿರುವ ಆಟಗಳಿಂದ, ಮಾತುಗಳಿಂದ ಬೇಸರ ಆಗಿದ್ದಾರೆ ನಿಮಗೆಲ್ಲಾ ಕ್ಷಮೆ ಕೇಳುತ್ತೇನೆ ಎಂದು ಕೈ ಮುಗಿದು ವೋಟ್ಗೆ ಮನವಿ ಮಾಡಿದ್ದಾರೆ.
ಉಗ್ರಂ ಮಂಜು ಅಂತೂ ಚೆನ್ನಾಗಿ ಮಾತಾಡಿದ್ದಾರೆ. ಕುಟುಂಬದಲ್ಲಿ ಇದ್ರೆ ಈ ತರ ಮಗ ಇರಬೇಕು. ಒಬ್ಬ ಅಣ್ಣನಾಗಿ ಇದ್ದರೇ ಈ ತರ ಬದುಕಬೇಕು. ಆ ರೀತಿಯಾಗಿ ಬದುಕುತ್ತೇನೆ ಎಂದು ಹೇಳಿದ್ದಾರೆ. ಇದಾದ ಮೇಲೆ ರಜತ್ ಮಾತನಾಡಿ, ನನ್ನಮ್ಮ ಯಾವಾಗಲೂ ಹೇಳೋರು.
ಮಗನೇ ಹಿಂಗೆ ಇರಬೇಡ ಕಣೋ. ಯಾರು ಇಷ್ಟಪಡಲ್ಲ ಅಂತ. ನನ್ನ ಕ್ಯಾರೆಕ್ಟರ್ ನಾನು ಚೇಂಜ್ ಮಾಡಿಕೊಳ್ಳಬೇಕಾ?. ತಪ್ಪುಗಳು ನನ್ನ ಕಡೆಯಿಂದಲೂ ಆಗಿದೆ. ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋದು ರಜತ್ ಕಣೋ ಎಂದು ಸಖತ್ ಆಗಿಯೇ ಡೈಲಾಗ್ ಹೇಳಿದ್ದಾರೆ. ಬಿಗ್‌ಬಾಸ್ ಸೀಸನ್ 11ರ ಫಿನಾಲೆಗೆ ತ್ರಿವಿಕ್ರಮ್, ಮಂಜು, ಮೋಕ್ಷಿತಾ, ರಜತ್, ಹನುಮಂತ, ಭವ್ಯಾ ತಲುಪಿದ್ದಾರೆ. ಫಿನಾಲೆ ವಾರದಲ್ಲಿ ಯಾರನ್ನು ವೀಕ್ಷಕರು ಗೆಲ್ಲಿಸುತ್ತಾರೆ ಅನ್ನೋದಕ್ಕೆ ಈಗ ಹೊಸ ಡೆಡ್‌ಲೈನ್ ಫಿಕ್ಸ್ ಆಗಿದೆ.