
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಭಾರಿಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದಾರೆ. ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾದಲ್ಲಿ ಸಲ್ಲುಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಹಾಗೂ ರಶ್ಮಿಕಾ ಮಂದಣ್ಣ ವಯಸ್ಸಿನ ಅಂತರದ ಬಗ್ಗೆ ಸಖತ್ ಟ್ರೋಲ್ ಆಗಿದ್ದು ಈ ಬಗ್ಗೆ ಇದೀಗ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದಾರೆ.
ಸಿಕಂದರ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಲ್ಮಾನ್ ಖಾನ್ ತಮ್ಮ ಹಾಗೂ ರಶ್ಮಿಕಾ ಮಂದಣ್ಣ ಅವರ ವಯಸ್ಸಿನ ಅಂತರದ ಬಗ್ಗೆ ಆಗುತ್ತಿರುವ ಟ್ರೋಲ್ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಚಿತ್ರದಲ್ಲಿ ರಶ್ಮಿಕಾ ನಟನೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸಲ್ಮಾನ್ ಖಾನ್ ಗಿಂತ ರಶ್ಮಿಕಾ 31 ವರ್ಷ ಚಿಕ್ಕವರು ಎಂದು ಹೇಳಿ ಟ್ರೋಲ್ ಮಾಡಲಾಗಿತ್ತು. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸಲ್ಮಾನ್ ಇದೇ ವಿಷಯದ ಬಗ್ಗೆ ಮಾತನಾಡಿದ್ದರು. ‘ರಶ್ಮಿಕಾಗೆ ವಯಸ್ಸಿನ ಅಂತರದಿಂದ ಯಾವುದೇ ತೊಂದರೆ ಇಲ್ಲ. ಅವರ ತಂದೆಗೂ ಯಾವುದೇ ತೊಂದರೆ ಇಲ್ಲ. ಅವರಿಗಿಲ್ಲದ ಸಮಸ್ಯೆ ನಿಮಗೇಕೆ’ ಎಂದು ತಮಾಷೆಯಾಗಿಯೇ ಹೇಳಿದ್ದಾರೆ.
ಮುಂದುವರಿದು, ‘ರಶ್ಮಿಕಾ ಮದುವೆಯಾದರೂ ನಾನು ಅವರ ಜೊತೆ ನಟಿಸುತ್ತೇನೆ’. ಅವರಿಗೆ ಮಗಳಿದ್ದರೆ ನಾನು ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ಸಲ್ಮಾನ್ ಹೇಳಿದ್ದು ಸದ್ಯ ಸಲ್ಮಾನ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.