ಧರ್ಮಸ್ಥಳ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಏಕೆ ಮುಂದಾಗಿಲ್ಲ- ಬಿವೈ ವಿಜಯೇಂದ್ರ ಪ್ರಶ್ನೆ!

0
Spread the love

ಬೆಂಗಳೂರು:- ಧರ್ಮಸ್ಥಳ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಏಕೆ ಮುಂದಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಿನ್ನೆ ನಮ್ಮ ಪಕ್ಷದ ಹಿರಿಯರ ನೇತ್ರತ್ವದಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥ್‌ನ ದರ್ಶನ ಪಡೆದಿದ್ವಿ.

Advertisement

ವೀರೇಂದ್ರ ‌ಹೆಗಡೆ ಅವರನ್ನೂ ಸಹ ನಾವು ಭೇಟಿ ಮಾಡಿದ್ದೇವೆ. ಅಪಪ್ರಚಾರಕ್ಕೆ ಕಡಿವಾಣ ಹಾಕಲು ಯಾಕೆ‌ ಸರ್ಕಾರ ಪ್ರಯತ್ನ ಮಾಡಿಲ್ಲ? ಇದರ ಬಗ್ಗೆ ಪರಮೇಶ್ವರ್ ಅವರು ಉತ್ತರ ಕೊಡಬೇಕು. SIT ತನಿಖೆಯ ಮಧ್ಯಂತರ ವರದಿಯನ್ನ ಕೊಡಬೇಕು. ಪರಮೇಶ್ವರ್ ಸಮಗ್ರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಡಿಕೆ ಶಿವಕುಮಾರ್ ಅವರೇ ಷಡ್ಯಂತ್ರ ಅಂತ ಹೇಳಿದ್ರು, ಸಮಯ ಬಂದಾಗ ಹೇಳ್ತೇನೆ ಅಂದಿದ್ರು. ಡಿಕೆ ಶಿವಕುಮಾರ್ ಅವರಿಗೆ ಮತ್ಯಾವ ಸಮಯ ಬರಬೇಕು? ಅಂತ ಪ್ರಶ್ನೆ ಮಾಡಿದ್ದಾರೆ. ಮುಂದುವರಿದು.. ನಮ್ಮ ಕಾರ್ಯಕರ್ತರ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ದೂರು ದಾಖಲಿಸುತ್ತಾರೆ.

ಆದ್ರೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಏಕಿಲ್ಲ? ಎಡಪಂಥೀಯರ ಒತ್ತಡದ ಬಗ್ಗೆ ದಿನೇಶ್ ಗುಂಡೂರಾವ್ ಹೇಳ್ತಾರೆ. ಅದರ ಹಿಂದಿರುವವರ ಬಗ್ಗೆ ಹೇಳಬೇಕು. ಯೂಟ್ಯೂಬರ್ಸ್ ಮೇಲೆ ಯಾಕೆ ಕ್ರಮವಿಲ್ಲ? ಅನ್ನೊದನ್ನ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here