ಬೆಂಗಳೂರು: ಬಿಜೆಪಿಯವರ ಬಗ್ಗೆ ನಾನ್ಯಾಕೆ ಕಾಳಜಿ ತೋರಿಸಲಿ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ಬಂದಿತ್ತು ಹೋಗಿದ್ದಾರೆ. ಏಕನಾಥ್ ಶಿಂಧೆ ಎನ್ನುತ್ತಾರೆ ಅವರ ಸಾಮರ್ಥ್ಯ ಅಷ್ಟೇನಾ.
Advertisement
ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಸ್ವತಂತ್ರವಾಗಿ ಯಾವತ್ತಾದ್ರೂ ಅಧಿಕಾರಕ್ಕೆ ಬಂದಿದ್ದಾರಾ. ಹೋದ ಸಲ 17 ಏಕನಾಥ್ ಶಿಂಧೆಗಳನ್ನು ಕರೆದುಕೊಂಡು ಹೋಗಿದ್ರಲ್ಲಾ. ಈ ಸಲ ಅದು ಸಾಧ್ಯವಿಲ್ಲ. ಒಂದು ಅರ್ಥ ಆಗ್ತಿದೆ, ಅವರಲ್ಲಿ ಧಮ್ಮಿಲ್ಲ, ಸಾಮರ್ಥ್ಯ ಇಲ್ಲ. ಬಿಜೆಪಿಯವರ ಬಗ್ಗೆ ನಾನ್ಯಾಕೆ ಕಾಳಜಿ ತೋರಿಸಲಿ,
ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ಬಿಜೆಪಿಯವರು ಯಾರನ್ನಾದ್ರೂ ದ್ವೇಷಿಸಿಕೊಳ್ಳಲಿ. ಮೋದಿ, ಖರ್ಗೆ ಅಕ್ಕಪಕ್ಕ ಫೋಟೋ ಇರುತ್ತೆ. ಹಾಗಂತ ಮೋದಿ ಕಾಂಗ್ರೆಸ್ ಸೇರುತ್ತಾರೆ ಅನ್ನೋಕಾಗುತ್ತಾ ಎಂದು ತಿರುಗೇಟು ಕೊಟ್ಟರು.