ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ನಾನಾ ರೀತಿಯ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪು ಹೆಸರಲ್ಲಿ ರಕ್ತ ದಾನ, ನೇತ್ರದಾನ, ಉಚಿತ ಆರೋಗ್ಯ ಶಿಭಿರ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡ್ತಿದ್ದಾರೆ. ಇದೀಗ ಅಪ್ಪು ಜನ್ಮ ದಿನಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಶೇಷವಾದ ಈ ಪೋಸ್ಟ್ ಅಲ್ಲಿ ಅಪ್ಪು ಪಾತ್ರದ ವಿಚಾರ ಬರೆದುಕೊಂಡಿದ್ದಾರೆ.
ಅಪ್ಪು ಆಫ್ ಸ್ಕೀನ್ ಮತ್ತು ಆನ್ ಸ್ಕ್ರೀನ್ ನಿರ್ವಹಿಸಿದ ಪಾತ್ರಗಳು ಸಾಕಷ್ಟು ಪ್ರಭಾವ ಬೀರಿವೆ. ಅದು ಸದಾ ಎಲ್ಲರಿಗೂ ಸ್ಪೂರ್ತಿ ಆಗುತ್ತವೆ. ಎಂದೂ ಅಳಿಸಲಾಗದ ಈ ಪಾತ್ರಗಳು ಸದಾ ಜನರ ಮನದಲ್ಲಿ ಇರುತ್ತವೆ. ಅಷ್ಟೇ ಸ್ಪೂರ್ತಿನೂ ಆಗುತ್ತೆ ಅಂತಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರೆದುಕೊಂಡಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿಯೇ ಈ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಒಂದು ಪೋಸ್ಟ್‌ಗೆ ಅಲ್ಲಿ ಪುನೀತ್ ಅವರ ಒಂದು ಸುಂದರವಾದ ಫೋಟೋವನ್ನೆ ಬಳಸಿಕೊಂಡಿದ್ದಾರೆ. ಅಪ್ಪು 50 ನೇ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಈ ಒಂದು ಪೋಸ್ಟ್ ಅನ್ನೋ ಅರ್ಥದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬರೆದುಕೊಂಡಿದ್ದಾರೆ.