ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ.
Advertisement
ಅಜಯ್ ರಾವ್ ಹಾಗೂ ಸಪ್ನಾ ಅವರುಗಳು ಪ್ರೀತಿಸಿ ಮದುವೆ ಆಗಿದ್ದರು. 2014 ರ ಡಿಸೆಂಬರ್ 18 ರಂದು ಹೊಸಪೇಟೆಯಲ್ಲಿ ಆಪ್ತರು, ಸಂಬಂಧಿಕರ ಎದುರು ಸರಳವಾಗಿ ಈ ಜೋಡಿಯ ವಿವಾಹ ನಡೆದಿತ್ತು.
ಈ ದಂಪತಿಗೆ ಚರಿಷ್ಮಾ ಹೆಸರಿನ ಮಗಳಿದ್ದಾಳೆ. 2019 ರಲ್ಲಿ ಮಗಳ ಜನನ ಆಗಿತ್ತು. ಇದೀಗ ಅಜಯ್ ರಾವ್ ಪತ್ನಿ ಸಪ್ನಾ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.